ಗಂಗಾ ಪ್ಯಾರಾ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ಸ್ವಾಗತ

ಗಂಗಾ ಪ್ಯಾರಾ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ಸ್ವಾಗತ

ಚನ್ನಗಿರಿ, ಫೆ. 3- ಇಲ್ಲಿನ ಗಂಗಾ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ  ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಮುಖ್ಯ ಅತಿಥಿ ಗಳಾಗಿ ಉಪಸ್ಥಿ ತರಿದ್ದ ಚನ್ನಗಿರಿ ತಾಲ್ಲೂಕು ಆರೋಗ್ಯಾಧಿಕಾರಿ  ಡಿ. ಶಿವಕುಮಾರ್ ಮಾತ ನಾಡಿ, ಪ್ಯಾರಾ ಮೆಡಿಕಲ್ ಕೋರ್ಸ್‌ ಮುಗಿಸಿದ ವಿದ್ಯಾರ್ಥಿಗಳಿಗೆ ಆರೋಗ್ಯ ಇಲಾಖೆ ಯಲ್ಲಿ ಹೆಚ್ಚಿನ ಉದ್ಯೋಗ ಅವಕಾಶ ಗಳಿದ್ದು, ಎಲ್ಲರೂ ಚೆನ್ನಾಗಿ ಓದಬೇ ಕೆಂದು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲ ವೀರೇಂದ್ರಕುಮಾರ್ ಮಾತನಾಡಿ, ಪ್ಯಾರಾಮೆಡಿಕಲ್ ಕೋರ್ಸುಗಳಿಗಿ ರುವ ಬೇಡಿಕೆಯಿಂದ ವಿದ್ಯಾರ್ಥಿಗಳು ಡಿಗ್ರಿಗಿಂತ ಹೆಚ್ಚಾಗಿ ಪ್ಯಾರಾಮೆಡಿಕಲ್ ಕೋರ್ಸ್ ಸೇರಲು ಬಯಸುತ್ತಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯ ಕೇಂದ್ರದ ಟಿ. ಲೋಕೇಶಪ್ಪ, ಉಪನ್ಯಾಸಕರಾದ ಅನುಷಾ, ಅರ್ಪಿತ, ಅಭಿಲಾಷ, ನಾಹೀದಾ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ಎಂ.ಎಸ್. ಬಸವನಗೌಡ ವಂದಿಸಿದರು.

error: Content is protected !!