ದಾವಣಗೆರೆ, ಏ.3- ಭಾರತ್ ವಿಕಾಸ್ ಪರಿಷತ್ ಗೌತಮ ಶಾಖೆಯಿಂದ ಭಾನುವಾರ ವಿದ್ಯಾನಗರ ಶಾಖೆಯಲ್ಲಿ ವಿಶ್ವಾವಸು ಸಂವತ್ಸರ ನಿಮಿತ್ತ ಯುಗಾದಿ ಸಂಭ್ರಮ ಆಚರಿಸಲಾಯಿತು.
ಯಶಸ್ವಿ ಜೀವನಕ್ಕೆ ಸಂಸ್ಕಾರ ಹಾಗೂ ಮೌಲ್ಯಗಳು ಬಹಳ ಮುಖ್ಯ. ಹಾಗಾಗಿ ಈ ನೂತನ ಸಂವತ್ಸರದಿಂದ ಎಲ್ಲರೂ ಉತ್ತಮ ಸಂಸ್ಕಾರಗಳನ್ನು ಮೈಗೂಡಿಸಿಕೊಳ್ಳೋಣ ಎಂದು ಆರ್‌ಎಸ್‌ಎಸ್‌ನ ದಕ್ಷಿಣ ಪ್ರಾಂತ ಪ್ರಮುಖರಾದ ಉಮಾಪತಿ ತಿಳಿಸಿದರು.
ಗೌತಮ ಶಾಖೆ ಅಧ್ಯಕ್ಷ ಅಜ್ಜಂಪುರ ಶೆಟ್ರು ವಿಜಯಕುಮಾರ್, ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಉಪಾಧ್ಯಕ್ಷ ಟಿ.ಎಸ್. ಜಯರುದ್ರೇಶ್, ಶಾಖೆಯ ಖಜಾಂಚಿ ಪುಟ್ಟಪ್ಪ ಕಾಶಿಪುರ, ಶಂಕರ ನಾರಾಯಣ, ಶಂಭುಲಿಂಗಪ್ಪ, ಮಧುಕರ, ಭವಾನಿ, ಶೀಲಾ ನಾಯಕ, ಶಾಂತಾ ತಿಪ್ಪಣ್ಣ, ಡಾ. ಆರತಿ ಸುಂದರೇಶ್ ಇತರರು ಇದ್ದರು.