ರಾಣೇಬೆನ್ನೂರು,ಮಾ.23- ಸೌರವ್ಯೂಹದ ಕುರಿತು ಜ್ಞಾನ ನೀಡುವ `ಸೈನ್ಸ್ ಪಾರ್ಕ್’ ಡಿಜಿಟಲ್ ಲೈಬ್ರರಿಗಳನ್ನು ನಗರದ ಹಾಗೂ ನನ್ನ ವಿಧಾನಸಭಾ ಕ್ಷೇತ್ರದ ಎಲ್ಲ ಶಾಲೆಗಳಲ್ಲಿ ಇನ್ನೊಂದು ತಿಂಗಳಲ್ಲಿ ಪ್ರಾರಂಭಿಸಲಾ ಗುವುದು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ಶಿಕ್ಷಕರ ವಿವಿಧ ಸಂಘಟನೆಗಳ ಸಹಯೋ ಗದಲ್ಲಿ ಇಂದು ನಡೆದ ಅಕ್ಷರದವ್ವ ಸಾವಿತ್ರಿ ಬಾಯಿ ಪುಲೆ ಶಿಕ್ಷಕಿಯರ ಸಂಘ ಉದ್ಘಾಟನೆ, ಸಾಧಕಿಯರಿಗೆ ಸನ್ಮಾನ, ಮಹಿಳಾ ದಿನಾಚರಣೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾ ರಂಭ ಉದ್ಘಾಟಿಸಿ ಶಾಸಕರು ಮಾತನಾಡುತ್ತಿದ್ದರು.
ನೀತಿಪಾಠ
`ನಾವು ಕಲಿಯುವಾಗ ಕೋಲು ಶಿಕ್ಷಕರ ಕೈಯಲ್ಲಿರುತ್ತಿತ್ತು. ಆಗ ನಮಗೆ ನೀತಿ ಪಾಠ ಸಿಗುತ್ತಿತ್ತು. ಆ ಕೋಲು ಈಗ ಶಿಕ್ಷಕರ ಕೈಯಿಂದ ಪೊಲೀಸರ ಕೈಗೆ ಹೋಗಿದೆ. ಹಾಗಾಗಿ ಈಗಿನ ವಿದ್ಯಾರ್ಥಿಗಳಿಗೆ ನೀತಿ ಪಾಠ ಸಿಗುತ್ತಿಲ್ಲ’.
– ಪ್ರಕಾಶ ಕೋಳಿವಾಡ,
ಶಾಸಕರು, ರಾಣೇಬೆನ್ನೂರು.
ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ, ಸರಾಗವಾಗಿ ಇಂಗ್ಲಿಷ್ ಮಾತನಾಡುವ ಕೌಶಲ್ಯಗಳೊಂದಿಗೆ ಉತ್ತಮ ಬದುಕು ಕಟ್ಟಿಕೊಳ್ಳುವುದು ಮತ್ತು ನಿರುದ್ಯೋಗ ರಹಿತ ತಾಲ್ಲೂಕು ಮಾಡುವ ಪ್ರಯತ್ನ ಇದಾಗಿದೆ. ಈ ಪ್ರಯತ್ನ ವಿಶ್ವದಲ್ಲಿ ಪ್ರಥಮದ್ದಾಗಿದ್ದು, ಈ ಸೌಲಭ್ಯ ಅಮೆರಿಕದಲ್ಲೂ ಇಲ್ಲ. ನನ್ನ ಈ ಪ್ರಯತ್ನ ನನಗೆ ಹೆಮ್ಮೆ ತರಿಸಿದೆ ಎಂದರು.
ಚಿಕ್ಕವರಿದ್ದಾಗ, ನಾವು ಕಲಿಯುವಾಗ ಕೋಲು ಶಿಕ್ಷಕರ ಕೈಯ್ಯಲ್ಲಿರುತ್ತಿತ್ತು. ಆಗ ನಮಗೆ ನೀತಿ ಪಾಠ ಸಿಗುತ್ತಿತ್ತು. ಆ ಕೋಲು ಈಗ ಶಿಕ್ಷಕರ ಕೈಯಿಂದ ಪೊಲೀಸರ ಕೈಗೆ ಹೋಗಿದೆ. ಹಾಗಾಗಿ ಈಗಿನ ವಿದ್ಯಾರ್ಥಿಗಳಿಗೆ ನೀತಿ ಪಾಠ ಸಿಗುತ್ತಿಲ್ಲ. ಪಠ್ಯದ ಜೊತೆಗೆ ನಮ್ಮ ಸಂಸ್ಕೃತಿ, ಸಂಸ್ಕಾರದ ಬೋಧನೆ ಅವಶ್ಯವಿದೆ. ಅದರ ಜೊತೆಗೆ ಕೌಶಲ್ಯದ ತರಬೇತಿ ಸಹ ನೀಡುವಲ್ಲಿ ಶಿಕ್ಷಕರು ಪ್ರಯತ್ನಿಸಬೇಕು ಎಂದು ಶಾಸಕರು ಹೇಳಿದರು.
ಲಿಂಗದಹಳ್ಳಿ ಹಿರೇಮಠದ ವೀರಭದ್ರ ಶ್ರೀ ಗಳು ಸಾನಿಧ್ಯ ವಹಿಸಿದ್ದರು. ಡಾ. ಹೇಮಾ ಪಾಟೀಲ ಮಹಿಳೆ ಆರೋಗ್ಯ ಕುರಿತು ಉಪನ್ಯಾಸ ನೀಡಿದರು. ಪಿಕೆಕೆ ಇನಿಷಿಯೇಟಿವ್ ಅಧ್ಯಕ್ಷೆ ಪೂರ್ಣಿಮಾ ಕೋಳಿವಾಡ, ಜಿಲ್ಲಾಧ್ಯಕ್ಷ ಮಲ್ಲೇಶ ಕರಿಗಾರ, ತಾಲ್ಲೂಕು ಅಧ್ಯಕ್ಷೆ ಎನ್. ಆರ್. ಚೂಡಾಮಣಿ, ಶಿಕ್ಷಣಾಧಿಕಾರಿ ಶಾಮಸುಂದರ ಅಡಿಗ, ಡಯಟ್ ಉಪನ್ಯಾಸಕಿ ವಿಜಯ ಪಾಟೀಲ, ಸಮನ್ವಯಾ ಧಿಕಾರಿ ಮಂಜಾನಾಯ್ಕ್, ಸಹನಾ ದೈವಜ್ಞ, ಎ.ಎ. ಮುಲ್ಲಾ ಮತ್ತಿತರರಿದ್ದರು.