ಹರಪನಹಳ್ಳಿ, ಮಾ. 20- ಬಿರು ಬಿಸಿಲಿನಿಂದ ಬಸವಳಿದಿದ್ದ ತಾಲ್ಲೂಕಿನ ಜನತೆಗೆ ಕಳೆದ ಎರಡು ದಿನಗಳಿಂದ ಪೂರ್ವ ಮುಂಗಾರು ಮಳೆ ಸಿಂಚನವಾಗಿದ್ದು, ಬಿಸಿಲಿನ ಝಳಕ್ಕೆ ಬಸವಳಿದ ಜನತೆಗೆ ತುಸು ನೆಮ್ಮದಿ ಉಂಟಾಗಿದೆ. ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಸಂಜೆ ಅರ್ಧ ಗಂಟೆಗೂ ಹೆಚ್ಚು ಕಾಲ ಅಲಿಕಲ್ಲು ಸಹಿತ ಮಳೆ ಸುರಿಯಿತು. ಪಟ್ಟಣದಲ್ಲಿ ಬೆಳಿಗ್ಗೆಯಿಂದಲೇ ಬಿಸಿಲಿನ ಧಗೆ ಹೆಚ್ಚಾಗಿತ್ತು. ಮಳೆಗೆ ಸಂಚಾರದಲ್ಲಿ ತುಸು ವ್ಯತ್ಯಯ ಉಂಟಾಗಿತ್ತು.
ಹರಪನಹಳ್ಳಿಯಲ್ಲಿ ಅಲಿಕಲ್ಲು ಸಹಿತ ಮಳೆ
