ಜಿಗಳಿ : ಕರ್ಣಾಟಕ ಬ್ಯಾಂಕಿನ 10ನೇ ವಾರ್ಷಿಕೋತ್ಸವ ಆಚರಣೆ

ಜಿಗಳಿ : ಕರ್ಣಾಟಕ ಬ್ಯಾಂಕಿನ  10ನೇ ವಾರ್ಷಿಕೋತ್ಸವ ಆಚರಣೆ

ಮಲೇಬೆನ್ನೂರು, ಮಾ.19- ಜಿಗಳಿ ಗ್ರಾಮದಲ್ಲಿರುವ ಕರ್ಣಾಟಕ ಬ್ಯಾಂಕ್ ಶಾಖೆಯ 10ನೇ ವರ್ಷದ ವಾರ್ಷಿಕೋತ್ಸವವನ್ನು ಮಂಗಳವಾರ ಸರಳವಾಗಿ ಸಂಭ್ರಮದಿಂದ ಆಚರಿಸಲಾಯಿತು.

ಕರ್ಣಾಟಕ ಬ್ಯಾಂಕಿನ ದಾವಣಗೆರೆ ಜಿಲ್ಲೆಯ ಕ್ಲಸ್ಟರ್ ಹೆಡ್ ಜಿ.ಬಿ.ಹರೀಶ್ ಮಾತನಾಡಿ, ದಾವಣಗೆರೆ ಜಿಲ್ಲೆಯಲ್ಲಿ ಕರ್ಣಾಟಕ ಬ್ಯಾಂಕ್ 21 ಶಾಖೆಗಳನ್ನು ಹೊಂದಿದ್ದು, ಜಿಗಳಿ ಶಾಖೆ ಅತಿ ಸಣ್ಣ ಶಾಖೆಯಾಗಿದ್ದರೂ 10 ವರ್ಷಗಳಲ್ಲಿ 20 ಕೋಟಿ ರೂ. ವ್ಯವಹಾರ ನಡೆಸಿರುವುದು ಹೆಮ್ಮೆಯ ವಿಷಯವಾಗಿದೆ.

10.50 ಕೋಟಿ ರೂ. ಸಾಲ ಸೌಲಭ್ಯ ಮತ್ತು 9.50 ಕೋಟಿ ರೂ. ಡಿಪಾಸಿಟ್ ಹೊಂದಿದೆ ಎಂದು ಅವರು ಹೇಳಿದರು.

ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿ.ಆನಂದಪ್ಪ ಮಾತನಾಡಿ, ಕೆಲವರು ಸರ್ಕಾರ ಸಬ್ಸಿಡಿ ಹಣಕ್ಕಾಗಿ ಸಾಲ ಪಡೆದುಕೊಂಡು, ನಂತರ ಸಾಲ ಮರುಪಾವತಿ ಮಾಡದೇ ಬ್ಯಾಂಕುಗಳಿಗೆ ವಂಚನೆ ಮಾಡುತ್ತಿರುವ ಬಗ್ಗೆ ಖೇದ ವ್ಯಕ್ತಪಡಿಸಿದರು. 

ಹಿರಿಯ ಪತ್ರಕರ್ತ ಜಿಗಳಿ ಪ್ರಕಾಶ್ ಮಾತನಾಡಿದರು. ಶಾಖೆಯ ವ್ಯವಸ್ಥಾಪಕ ಗಂಗಾಧರ್ ಸ್ವಾಗತಿಸಿದರು. ಗ್ರಾಹಕರಾದ ಯಲವಟ್ಟಿಯ ಡಿ.ಜಿ.ಹನುಮಂತಗೌಡ, ಗ್ರಾಮದ ಕೆ.ಷಣ್ಮುಖಪ್ಪ, ಬನ್ನಿಕೋಡು ನಾಗರಾಜಪ್ಪ, ಕೆ.ಜಿ.ಬಸವರಾಜ್, ಡಿ.ಮಂಜುನಾಥ್, ಮಾಕನೂರು ಶಿವು, ಹೆಚ್.ಬಿ.ವೀರೇಶ್, ಕುಮದೋಡ್ ಬಸಪ್ಪ, ನಿಟುವಳ್ಳಿ ಕರಿಬಸಪ್ಪ, ಶಾಖೆಯ ನವೀನ್, ರಾಹುಲ್, ಚಂದ್ರು, ವಿಜಯ್, ರಘು ಈ ವೇಳೆ ಹಾಜರಿದ್ದರು.

error: Content is protected !!