ಬಡವರ ಮಕ್ಕಳೂ ಐಎಎಸ್, ಐಪಿಎಸ್ ಆಗಬೇಕು

ಬಡವರ ಮಕ್ಕಳೂ ಐಎಎಸ್, ಐಪಿಎಸ್ ಆಗಬೇಕು

ಯಲವಟ್ಟಿಯಲ್ಲಿನ ಪುಣ್ಯಾರಾಧನೆ ಕಾರ್ಯಕ್ರಮದಲ್ಲಿ ಜಿ.ಬಿ.ವಿನಯ್ ಕುಮಾರ್

ಹರಿಹರ, ಮಾ.18- ಬಡವರ ಮಕ್ಕಳೂ ಐಎಎಸ್, ಐಪಿಎಸ್ ಆಗಬೇಕು. ಗ್ರಾಮೀಣ ಪ್ರದೇಶದ ಮಕ್ಕಳು ಯಾವುದೇ ಅವಕಾಶಗಳಿಂದ ವಂಚಿತರಾಗಬಾರದು. ಈ ನಿಟ್ಟಿನಲ್ಲಿ ಪ್ರವಾಸ ಮಾಡಿ ಶಿಕ್ಷಣದ ಮಹತ್ವ ಕುರಿತಂತೆ ಜಾಗೃತಿ ಮೂಡಿಸುತ್ತಿದ್ದೇನೆ ಎಂದು ಇನ್ ಸೈಟ್ಸ್ ಐಎಎಸ್ ಸಂಸ್ಥೆಯ ಸಂಸ್ಥಾಪಕ ಹಾಗೂ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಹೇಳಿದರು.

ತಾಲ್ಲೂಕಿನ ಸುಕ್ಷೇತ್ರ ಯಲವಟ್ಟಿಯ ಶ್ರೀ ಗುರು ಸಿದ್ಧಾಶ್ರಮದಲ್ಲಿ ನಡೆದ ವೈರಾಗ್ಯನಿಧಿ ಶ್ರೀ ಶಿವಾನಂದ ಮಹಾಸ್ವಾಮಿಗಳವರ 20ನೇ ವರ್ಷದ ಪುಣ್ಯಾರಾಧನೆ ಹಾಗೂ ಜ್ಞಾನನಿಧಿ ಶ್ರೀ ನಿತ್ಯಾನಂದ ಮಹಾಸ್ವಾಮಿಗಳವರ 18ನೇ ವರ್ಷದ ಪುಣ್ಯಾರಾಧನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಪ್ರತಿಯೊಬ್ಬ ಮಕ್ಕಳೂ ಒಳ್ಳೆಯ ಶಿಕ್ಷಣ ಪಡೆಯು ವಂತಾಗಬೇಕು. ಆಗ ಮಾತ್ರ ಪ್ರಪಂಚದ ಯಾವುದೇ ಮೂಲೆಯಲ್ಲಾದರೂ ಹೋಗಿ ಸ್ವಾವಲಂಬನೆ ಜೀವನ ಸಾಗಿಸಬಹುದು.    ಮಠಮಾನ್ಯಗಳು ಶೈಕ್ಷಣಿಕ ರಂಗದಲ್ಲಿ ಅಚ್ಚಳಿಯದ ಕೈಂಕರ್ಯ ಮಾಡಿವೆ. ಅನ್ನದಾನ, ವಿದ್ಯಾದಾನ ಮಾಡಿ ಲಕ್ಷಾಂತರ ಮಕ್ಕಳ ಭವಿಷ್ಯ ರೂಪಿಸಿವೆ.  ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುವಂತಾ ಗಬೇಕು. ಸೇವಾ ಕಾರ್ಯಗಳು ಜನಮಾನಸದಲ್ಲಿ ಉಳಿ ದಾಗ ಮಾತ್ರ ಧರ್ಮ ಉಳಿಯುತ್ತದೆ. ಧರ್ಮಕಾರ್ಯ ಗಳು ನೆನಪಿನಲ್ಲಿರುತ್ತವೆ ಎಂದು  ಹೇಳಿದರು.

ಈ ಸಂದರ್ಭದಲ್ಲಿ ಸದ್ಗುರು ಶ್ರೀ ಯೋಗಾನಂದ  ಸ್ವಾಮೀಜಿ ಅವರು ವಿನಯ್ ಕುಮಾರ್ ಅವರನ್ನು   ಗೌರವಿಸಿದರು. ಚಿತ್ರದುರ್ಗದ ಶ್ರೀ ಸದ್ಗುರು ಕಬೀರಾನಂದ ಆಶ್ರಮದ ಶ್ರೀ ಶಿವಲಿಂಗಾನಂದ  ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.  

ದಾವಣಗೆರೆಯ ಶ್ರೀ ಜಡೆಸಿದ್ಧ ಶಿವಯೋಗೀಶ್ವರ ಮಠದ ಶ್ರೀ ಶಿವಾನಂದ  ಸ್ವಾಮೀಜಿ, ಹದಡಿಯ ಚಂದ್ರಗಿರಿ ಸಂಸ್ಥಾನ ಮಠದ ಶ್ರೀ ಮುರುಳೀಧರ  ಸ್ವಾಮೀಜಿ, ಹೋತನಹಳ್ಳಿಯ ಶ್ರೀ ಸಿದ್ಧಾರೂಢ ಮಠದ ಶ್ರೀ ಶಂಕರಾನಂದ  ಸ್ವಾಮೀಜಿ, ಚಿತ್ರಭಾನುಕೋಟೆಯ ಶ್ರೀ ಕೃಷ್ಣಾನಂದ ಭಾರತಿ  ಸ್ವಾಮೀಜಿ, ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಹನಗವಾಡಿ ವೀರೇಶ್ ಮತ್ತು  ಇತರರು ವೇದಿಕೆಯಲ್ಲಿ ಹಾಜರಿದ್ದರು.

error: Content is protected !!