ನಗರದಲ್ಲಿ ಇಂದು ಶಾಲಾ – ಕಾಲೇಜು ಅಂಗಳದಲ್ಲಿ ಕಸಾಪ ದತ್ತಿ ಉಪನ್ಯಾಸ

ನಗರದಲ್ಲಿ ಇಂದು ಶಾಲಾ – ಕಾಲೇಜು ಅಂಗಳದಲ್ಲಿ ಕಸಾಪ ದತ್ತಿ ಉಪನ್ಯಾಸ

ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶಾಲಾ-ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವದ ಅಂಗವಾಗಿ ದತ್ತಿ ಉಪನ್ಯಾಸ ಕಾರ್ಯಕ್ರಮವು ಬಿಇಎ ಶಿಕ್ಷಣ ಮಹಾವಿದ್ಯಾಲಯದಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ  ನಡೆಯಲಿದೆ. 

ಬಿಇಎ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಶ್ರೀಮತಿ ನೀತು ಎ.ಜೆ. ಅಧ್ಯಕ್ಷತೆ ವಹಿಸುವರು. ಜನಪದ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು ವಿಷಯವಾಗಿ ಡಾ. ಪ್ರಭಾಕರ ಉಪನ್ಯಾಸ ನೀಡುವರು.

ಬಿ. ದಿಳ್ಯಪ್ಪ, ಷಡಕ್ಷರಪ್ಪ ಎಂ. ಬೇತೂರು, ಶ್ರೀಮತಿ ಪರಿಮಳ ಜಗದೀಶ್, ಎ.ಎಂ. ಸಿದ್ದೇಶ್ ಕುರ್ಕಿ, ನವೀನ್‌ಕುಮಾರ್ ಉಪಸ್ಥಿತರಿರುವರು. ತಾಲ್ಲೂಕು ಕಸಾಪ ಅಧ್ಯಕ್ಷರಾದ ಶ್ರೀಮತಿ ಸುಮತಿ ಜಯಪ್ಪ ಪ್ರಾಸ್ತಾವಿಕ ನುಡಿಗಳನ್ನಾಡುವರು. 

ಶ್ರೀಮತಿ ರಾಜೇಶ್ವರಿ ಜಯಣ್ಣ ದತ್ತಿ  ದಾನಿ ಎ.ಸಿ. ಜಯಣ್ಣ, ಬಾಡದ ಶ್ರೀಮತಿ ಶಾಂತಮ್ಮ ಪ್ರೊ. ಬಿ.ಕೆ. ಸಿದ್ದಪ್ಪ ಸ್ಮಾರಕ ದತ್ತಿ ದಾನಿ ಶ್ರೀಮತಿ ಸಾವಿತ್ರಮ್ಮ ಪ್ರೊ. ಬಿ. ಸಿದ್ದಪ್ಪ, ದಾವಣಗೆರೆ ಹಾಗೂ ಹಿರೇಕೋಗಲೂರು ಶ್ರೀಮತಿ ಪಾರ್ವತಮ್ಮ ಹಾದಿಮನೆ ವೀರಭದ್ರಪ್ಪ ದತ್ತಿ ದಾನಿ ಡಾ. ಹೆಚ್.ವಿ. ವಾಮದೇವಪ್ಪ ಅವರುಗಳಿಂದ ದತ್ತಿ ಕಾರ್ಯಕ್ರಮ ನಡೆಯುವುದು.

error: Content is protected !!