ದಾವಣಗೆರೆ, ಮಾ. 17 – ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳೂ ಆದ ದಿನೇಶ್ ಕೆ. ಶೆಟ್ಟಿ ಅವರ 62ನೇ ಹುಟ್ಟುಹಬ್ಬದ ಸಂಭ್ರಮಾಚರಣೆಯನ್ನು ಹಿರಿಯರು, ವನಿತೆಯರು, ವಿಶೇಷ ಚೇತನ ಮಕ್ಕಳ ಜೊತೆ ಹಾಗೂ ಸರ್ಕಾರಿ ಶಾಲೆಯ ಮಕ್ಕಳ ಜೊತೆ ಆಚರಿಸಲಾಯಿತು.
ರಾಮ ಅಂಡ್ ಕೋ ಸರ್ಕಲ್‌ನಲ್ಲಿರುವ ಶ್ರೀ ಗಣೇಶ್ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಹಿರಿಯ ವನಿತಾಧಾಮದಲ್ಲಿ ಎಸ್‌ಎಸ್‌ಎಮ್ ಯೂಥ್ ಫೋರಂ ಅಧ್ಯಕ್ಷ ಪ್ರತಾಪ್ ಮತ್ತು ಮಂಜು ಮಗುವೀರ್ ಅವರು ಏರ್ಪಡಿಸಿದ್ದ ಸಿಹಿ ಊಟದ ವ್ಯವಸ್ಥೆ ಮಾಡಿ ಹಿರಿಯರ ಆಶೀರ್ವಾದ ಪಡೆದರು.
ಅಂಧ ಮಕ್ಕಳ ಆಶಾಕಿರಣ ಟ್ರಸ್ಟ್‌ನಲ್ಲಿ ಮಕ್ಕಳ ಜೊತೆ ಸೇರಿ ಮಕ್ಕಳಿಗೆ ಸಿಹಿ ಹಂಚಿದರಲ್ಲದೇ, ಊಟದ ವ್ಯವಸ್ಥೆ ಮಾಡಿದ್ದರು. ಕೆಟಿಜಿ ನಗರದಲ್ಲಿ ಕೇರಮ್ ಗಣೇಶ್ ಅವರು ಏರ್ಪಡಿಸಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಪುಸ್ತಕ, ಪೆನ್ಸಿಲ್, ಸಿಹಿಯನ್ನು ವಿತರಿಸಿದರು.
ನಿಟುವಳ್ಳಿಯಲ್ಲಿ ಶಿವರಾಜ್ ಕುಮಾರ್ ಅಭಿಮಾನಿ ಬಳಗದ ವತಿಯಿಂದ ಅಧ್ಯಕ್ಷ ಯೋಗೇಶ್ ಶಿವಣ್ಣ ಅವರು ಏರ್ಪಡಿಸಲಾಗಿದ್ದ ಪುನೀತ್ ರಾಜಕುಮಾರ್ ಅವರ 50ನೇ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ದಿನೇಶ್ ಕೆ. ಶೆಟ್ಟಿ ಭಾಗವಹಿಸಿ, ಸರ್ಕಾರಿ ಶಾಲೆಯ ಮಕ್ಕಳ ಜೊತೆ ಪುನೀತ್ ರಾಜಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.
ಅಲ್ಲದೇ, ಜೆ.ಎಚ್. ಪಟೇಲ್ ಕಾಲೇಜಿನಲ್ಲಿ ದಿನೇಶ್ ಕೆ. ಶೆಟ್ಟಿ ಅವರ ಹೆಸರಿನಲ್ಲಿ ಕಾಲೇಜಿನ ಕಾರ್ಯದರ್ಶಿ ಮುಸ್ತಫಾ ಅವರ ನೇತೃತ್ವದಲ್ಲಿ ವಿದ್ಯಾರ್ಥಿ ವೇತನ ನೀಡಲಾಯಿತು. 70ಕ್ಕೂ ಹೆಚ್ಚು ಮಕ್ಕಳಿಗೆ ತಲಾ ಮೂರರಿಂದ ಹತ್ತು ಸಾವಿರದವರೆಗೆ ವಿದ್ಯಾರ್ಥಿ ವೇತನವನ್ನು ದಿನೇಶ್ ಶೆಟ್ಟಿ ಅವರ ಮೂಲಕ ನೀಡಲಾಯಿತು. ಬಡ ಮತ್ತು ಹಳ್ಳಿ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಕವಾಗಿ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆದ್ಯತೆ ಕೊಟ್ಟು ಮಕ್ಕಳು ಒಳ್ಳೆಯ ವಿದ್ಯಾರ್ಥಿಗಳಾಗಲಿ ಎಂದು ದಿನೇಶ್ ಹಾರೈಸಿದರು.