ಬಜೆಟ್‌ನಲ್ಲಿ ವಿಕಲಚೇತನರ ಬೇಡಿಕೆ ಕಡೆಗಣನೆ

ಬಜೆಟ್‌ನಲ್ಲಿ ವಿಕಲಚೇತನರ ಬೇಡಿಕೆ ಕಡೆಗಣನೆ

ದಾವಣಗೆರೆ, ಮಾ.10- ರಾಜ್ಯ ಸರ್ಕಾರದ 2025-26ನೇ ಸಾಲಿನ ಆಯ ವ್ಯಯದಲ್ಲಿ ವಿಕಲಚೇತನರ ಬೇಡಿಕೆಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ರಾಜ್ಯ ವಿಕಲಚೇತನರ ಆರ್.ಪಿ.ಡಿ ಟಾಸ್ಕ್ ಪೋರ್ಸ್‌ನ ಗೌರವಾಧ್ಯಕ್ಷೆ ಎಂ. ವಿಜಯಲಕ್ಷ್ಮಿ ಬೇಸರ ವ್ಯಕ್ತಪಡಿಸಿದ್ದಾರೆ. 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲಿ 13 ಲಕ್ಷಕ್ಕೂ ಅಧಿಕ ವಿಕಲಚೇತನರಿದ್ದಾರೆ. ರಾಜ್ಯ ಚುನಾವಣಾ ಆಯೋಗದ ಪ್ರಕಾರ 5 ಲಕ್ಷಕ್ಕಿಂತ ಹೆಚ್ಚು ವಿಕಲಚೇತನ ಮತದಾ ರರಿದ್ದು, ಕಳೆದ ಸಾರ್ವತ್ರಿಕ ಚುನಾವಣೆಗಳಲ್ಲಿ ಗಣ ನೀಯ ಪ್ರಮಾಣದಲ್ಲಿ ಮತಗಳನ್ನು ಚಲಾಯಿಸಿದ್ದಾರೆ.

ಕಳೆದ 10 ವರ್ಷಗಳಿಂದ ಅಂಗವಿಕಲರ ಪೋಷಣಾ ಭತ್ಯೆ ಹೆಚ್ಚಿಗೆಯಾಗಿಲ್ಲ. ಪ್ರಸ್ತುತ ಬೆಲೆ ಏರಿಕೆ ದಿನಗಳಲ್ಲಿ ಸರ್ಕಾರ ನೀಡುತ್ತಿರುವ ಮಾಸಾಶನ ಯಾವುದಕ್ಕೂ ಸಾಕಾಗುತ್ತಿಲ್ಲ. ಒಂದೆಡೆ ಯಾವುದೇ ಉದ್ಯೋಗವಿಲ್ಲದೇ ಜೀವನ ನಿರ್ವಹಣೆ ಕಷ್ಟವಾಗಿದೆ.

ಈ ಬಾರಿಯ 2025-26 ಸಾಲಿನ ಬಜೆಟ್‌ನಲ್ಲಿ ವಿಕಲಚೇತನರ ಮಾಸಾಶನ ಹೆಚ್ಚಳ, ವಿಕಲಚೇತನರ ರಿಯಾಯತಿ ದರದ ಬಸ್ ಪಾಸ್‌ ಪ್ರಯಾಣದ ಮಿತಿಯ ಹೆಚ್ಚಳ, ರಾಜಕೀಯ ಮೀಸಲಾತಿ, ಸುಲಭ ಲಭ್ಯತೆಯ ವ್ಯವಸ್ಥೆ ಕಲ್ಪಿಸಲು ಪ್ರತ್ಯೇಕ ಅನುದಾನ ಮೀಸಲು, ಬ್ಯಾಕ್ ಲಾಗ್ ಹುದ್ದೆಗಳ ಭರ್ತಿ ಸೇರಿದಂತೆ ಯಾವ ಪ್ರಮುಖ ಬೇಡಿಕೆಯನ್ನೂ ಈಡೇರಿಸಿಲ್ಲ ಎಂದು ದೂರಿದ್ದಾರೆ.

error: Content is protected !!