ರಾಣೇಬೆನ್ನೂರು, ಫೆ. 23 – ನಗರದ ಸ್ವಕುಳ ಸಾಳಿ ಸಮಾಜದ ಜಿಹ್ವೇಶ್ವರ ಮಹಿಳಾ ಮಂಡಳಿಯ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಸಂಕ್ರಾಂತಿ ಸಂಭ್ರಮದ ಎಳ್ಳು-ಬೆಲ್ಲ ವಿತರಣೆ ಕಾರ್ಯಕ್ರಮ ಇಲ್ಲಿನ ತುಳಜಾ ಭವಾನಿ ದೇವಸ್ಥಾನದಲ್ಲಿ ನಡೆಯಿತು.
ಅವಿರೋಧವಾಗಿ ಆಯ್ಕೆಯಾಗಿರುವ ಜಿಹ್ವೇಶ್ವರ ಮಹಿಳಾ ಮಂಡಳದ ನೂತನ ಅಧ್ಯಕ್ಷರಾದ ರಾಜೇಶ್ವರಿ ಏಕಬೋಟೆ, ಉಪಾಧ್ಯಕ್ಷೆ ಚಂದ್ರಮ್ಮ. ರೋಖಡೆ, ಕಾರ್ಯದರ್ಶಿ ಯಶೋಧ ಏಡಕೆ, ಸಹಕಾರ್ಯದರ್ಶಿ ಅರುಣಾ ಸೂರೆ, ಖಚಾಂಚಿ ಶಾಂತಲಕ್ಷ್ಮಿ ರೋಖಡೆ ಹಾಗೂ ಸದಸ್ಯರಾಗಿ ಜಯಶ್ರೀ ಕ್ಷೀರಸಾಗರ, ಸುಷ್ಮಾ ರೋಖಡೆ, ಸುಜಾತ ಏಕಬೋಟೆ, ವೈಶಾಲಿ ಪಾಣಿಭಾತೆ, ವಿದ್ಯಾ ತಾಂಬೆ, ಲಲಿತಾ ಪಾಣಿಭಾತೆ, ನೇತ್ರಾವತಿ ಕ್ಷೀರಸಾಗರ, ಶೋಭಾ ಏಕಬೋಟೆ, ಸವಿತಾ ಏಕಬೋಟೆ ಅಧಿಕಾರ ಸ್ವೀಕರಿಸಿದರು.
ನಗರ ದೇವತೆಯರಾದ ಶ್ರೀ ಚೌಡೇಶ್ವರಿ ದೇವಿಯರ ಜಾತ್ರೆಯಿಂದಾಗಿ ಸಾಮೂಹಿಕವಾಗಿ ಆಚರಿಸುವ ಸಂಕ್ರಾಂತಿ ಎಳ್ಳು-ಬೆಲ್ಲ ವಿತರಣೆ ಕಾರ್ಯಕ್ರಮವನ್ನು ತಾಯಿ ತುಳಜಾಭವಾನಿ ದೇವಿಗೆ ವಿಶೇಷ ಅಲಂಕಾರ, ಪೂಜೆ, ಭಜನೆಯೊಂದಿಗೆ ಇಂದು ಆಚರಿಸಿ ಎಳ್ಳು-ಬೆಲ್ಲ ವಿನಿಮಯ ಮಾಡಲಾಯಿತು.