ದಾವಣಗೆರೆ, ಫೆ. 14- ತಾಲ್ಲೂಕಿನ ಗೋಪನಾಳ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎನ್.ಎಂ.ಮಲ್ಲಿಕಾರ್ಜುನಯ್ಯ ಮತ್ತು ಉಪಾಧ್ಯಕ್ಷರಾಗಿ ಎ.ಕೆ.ಚಂದ್ರಮ್ಮ ಆಯ್ಕೆಯಾಗಿದ್ದಾರೆ. ಈಚೆಗೆ ನಡೆದ ಚುನಾವಣೆಯಲ್ಲಿ ಈ ಆಯ್ಕೆ ನಡೆದಿದ್ದು, ನಿರ್ದೇಶಕರಾಗಿ ಕೆ.ಬಿ.ಹಾಲೇಶಪ್ಪ, ಎಸ್.ಡಿ.ಪ್ರಕಾಶ್, ಡಿ.ಕೆ.ಮಂಜಪ್ಪ, ಹೆಚ್.ಕೆ.ಹನುಮಂತಪ್ಪ, ಎಂ.ಜೆ.ಓಬಳಪ್ಪ, ಬಿ.ಷಫೀಸಾಬ್, ಹೆಚ್.ಕೆ. ಧನ್ಯಕುಮಾರ್, ಬೇತೂರು ಶಕುಂತಲಮ್ಮ, ಟಿ.ಬಿ.ಶ್ವೇತಾ ಬಂಧು, ಹೆಚ್.ರಾಜಪ್ಪ ಆಯ್ಕೆಯಾಗಿದ್ದಾರೆ.
ಸಹಕಾರ ಅಭಿವೃದ್ಧಿ ಅಧಿಕಾರಿ ಸತೀಶ್‍ನಾಯ್ಕ್ ಚುನಾವಣಾಧಿಕಾರಿ ಯಾಗಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಡಿ.ಮೈಲಾರಪ್ಪ, ಸಹಾಯಕರಾದ ಪರ್ವಿನ್‍ತಾಜ್, ಶ್ರೀನಿವಾಸ್ ಮತ್ತಿತರರು ಈ ಸಂದರ್ಭದಲ್ಲಿದ್ದರು.