ದಾವಣಗೆರೆ ಸಮೀಪದ ಆವರಗೊಳ್ಳ ಗ್ರಾಮದ ಶ್ರೀ ವೀರ ಭದ್ರೇಶ್ವರ ಸ್ವಾಮಿಯ ರಥೋತ್ಸವವು ಇದೇ ದಿನಾಂಕ 17ರಂದು ಜರುಗಲಿದೆ ಎಂದು ವೀರಭದ್ರೇಶ್ವರ ಸ್ವಾಮಿ ಸೇವಾ ಸಮಿತಿಯ ಅಧ್ಯಕ್ಷ ಬಿ.ಎಂ. ಷಣ್ಮುಖಯ್ಯ ತಿಳಿಸಿದರು.
ಇಂದು ರಾತ್ರಿ 8 ಗಂಟೆಗೆ ರಥಕ್ಕೆ ಕಳಸಾರೋಹಣ ಹಾಗೂ 9 ಗಂಟೆಗೆ ಅಶ್ವಾರೋಹಣ ಉತ್ಸವ ನಡೆೆಯಲಿವೆ. ನಾಳೆ ಭಾನುವಾರ ರಾತ್ರಿ ದೊಡ್ಡಬಾತಿ ರೇವಣಸಿದ್ದೇಶ್ವರ ಸ್ವಾಮಿ ಮತ್ತು ಬೀರಲಿಂಗೇಶ್ವರ ಸ್ವಾಮಿಯ ಆಗಮನ, ವೀರಭದ್ರ ಸ್ವಾಮಿಗೆ ಹರಿದ್ರಾಲೇಪನ ಹಾಗೂ ತೇರುಮನೆ ಚೌಡೇಶ್ವರಿಗೆ ದೇವಸ್ಥಾನದ ವತಿಯಿಂದ ಉಡಿ ತುಂಬಲಾಗುವುದು.