ಹೊನ್ನಾಳಿ, ಫೆ.5- ಪಟ್ಟಣದ ಬಾಲರಾಜ ಘಾಟನಲ್ಲಿ ಅಯ್ಯಪ್ಪ ಸ್ವಾಮಿ ಸೇವಾ ಸಂಘದಿಂದ ಇಡಗುಂಜಿ ಮಹಾ ಗಣಪತಿ ಮೂರ್ತಿ ಪ್ರಾಣ ಪ್ರತಿಷ್ಟಾಪನೆಯನ್ನು ಮಂಜುನಾಥ ದೇವರು ಹಿರೇಕಲ್ಮಠ ಇವರ ಸಾನಿಧ್ಯದಲ್ಲಿ ನೆರವೇರಿಸಲಾಯಿತು.
ಅಯ್ಯಪ್ಪ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಡಿ.ಎಂ ಮಂಜಪ್ಪ, ಕಾರ್ಯದರ್ಶಿ ಕುಂಬಾರ ಗುಂಡಿ ಚಂದ್ರು, ಪದಾಧಿಕಾರಿಗಳಾದ ಕೆ.ವಿ ಚನ್ನಪ್ಪ, ಕೊನಕನಹಳ್ಳಿ ಮಂಜು, ಶರತ್, ಕೋರಿ ಚನ್ನೇಶ್, ನವೀನ, ಪಂಕಜಾ ಅರುಣಕುಮಾರ ಇನ್ನಿತರರಿದ್ದರು. ಸಂಘದ ಅಧ್ಯಕ್ಷ ಡಿ.ಎಂ ಮಂಜಪ್ಪ ಮಾತನಾಡಿ, ಇದೇ ದಿನಾಂಕ 12ರ ಹುಣ್ಣಿಮೆ ದಿನದಂದು ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮವನ್ನು ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿರುವುದಾಗಿ ತಿಳಿಸಿದರು.