ಹರಪನಹಳ್ಳಿ : ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಅಧ್ಯಕ್ಷರಾಗಿ ರಾಜಕುಮಾರ ಭರ್ಮಪ್ಪ

ಹರಪನಹಳ್ಳಿ : ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಅಧ್ಯಕ್ಷರಾಗಿ ರಾಜಕುಮಾರ ಭರ್ಮಪ್ಪ

ಹರಪನಹಳ್ಳಿ, ಫೆ.4-  ಸ್ಥಳೀಯ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಉಚ್ಚಂಗಿದುರ್ಗ ರಾಜಕುಮಾರ ಭರ್ಮಪ್ಳ, ಉಪಾಧ್ಯಕ್ಷರಾಗಿ ನಾಗರಾಜ ಗೊಂಗಡಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ, ತಹಶೀಲ್ದಾರ್ ಬಿ.ವಿ.ಗಿರೀಶ್ ಬಾಬು ಘೋಷಣೆ ಮಾಡಿದರು.

ಪಟ್ಟಣದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ನೂತನ ಅಧ್ಯಕ್ಷ ಸ್ಥಾನಕ್ಕೆ ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ್‌ ಅವರ ಮಾರ್ಗದರ್ಶನದಂತೆ ಸೋಮವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪಿ.ಬಿ.ಗೌಡ ಒಬ್ಬರೆ ಮಾತ್ರ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆಯಾದರು. 

ಪಿಕಾರ್ಡ್‌ ಬ್ಯಾಂಕ್‍ಗೆ ಅಧ್ಯಕ್ಷರಾಗಿ ಆಯ್ಕೆಯಾದ ರಾಜಕುಮಾರ ಭರ್ಮಪ್ಳ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿರುವ ಒಗ್ಗಟ್ಟಿನ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆ ಮಾಡಲು ಸಾಧ್ಯವಾಗಿದ್ದು, ಇದೇ ರೀತಿಯ ಒಗ್ಗಟ್ಟು ಮುಂದುವರೆಯಲಿದೆ, ನಾನು ಈಗಾಗಲೇ ಎರಡು ಬಾರಿ ನಿರ್ದೇಶಕನಾಗಿ, ಮೊದಲ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದೇನೆ. ರೈತರ ಮೇಲೆ ಯಾವುದೇ ಹೊರೆಯಾಗದಂತೆ ಸಾಲ ನೀಡುವ ಮೂಲಕ ಬ್ಯಾಂಕಿನ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು.

ಗಿರಜ್ಜಿ ಮಂಜುನಾಥ ಸಹಾಯಕ ಚುನಾವಣೆ ಅಧಿಕಾರಿಯಾಗಿದ್ದರು.

ಈ ಸಂದರ್ಭದಲ್ಲಿ ಪಿಕಾರ್ಡ್ ಬ್ಯಾಂಕ್‍ನ ನಿರ್ದೇಶಕರಾದ ಪಿ.ಎಲ್.ಪೋಮ್ಯಾನಾಯ್ಕ್, ಪಿ.ಬಿ.ಗೌಡ, ಮುತ್ತಿಗಿ ಸಾಬಳ್ಳಿ ಜಂಬಣ್ಣ, ಬೇಲೂರು ಸಿದ್ದೇಶ್, ಸೌಭಾಗ್ಯಮ್ಮ
ಪಿ.ಕೆ.ಮಹಾದೇವಪ್ಪ, ಶಕುಂತಲಮ್ಮ ಟಿ.ಜಗದೀಶ, ಬಾಗಳಿ ಭರಮನಗೌಡ, ಮತ್ತಿಹಳ್ಳಿ ಕ್ಷೇತ್ರದ ಮಂಜುನಾಥ, ಶಾಂತಕುಮಾರ್ ರೆಡ್ಡಿ, ಲಾಟಿ ದಾದಾಪೀರ್, ತೆಲಿಗಿ ಚಿದಾನಂದಸ್ವಾಮಿ, ಕಾಶೀನಾಥ ನಾಯ್ಕ್, ವ್ಯವಸ್ಥಾಪಕ ಶಾಹೀದ್, ಕ್ಯಾಶಿಯರ್ ಜಿ.ಎಂ.ರೂಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ವೆಂಕಟೇಶ್ ವಕೀಲರು, ಮೈದೂರು ರಾಮಪ್ಪ ಸೇರಿದಂತೆ ಇತರರಿದ್ದರು.

error: Content is protected !!