ಮೈಕ್ರೋ ಫೈನಾನ್ಸ್‌ ಕಿರುಕುಳ ನಿಯಂತ್ರಿಸಲು ಸರ್ಕಾರ ಕಠಿಣ ಕಾನೂನು ರೂಪಿಸುವಂತೆ ಆಗ್ರಹ

ಮೈಕ್ರೋ ಫೈನಾನ್ಸ್‌ ಕಿರುಕುಳ ನಿಯಂತ್ರಿಸಲು ಸರ್ಕಾರ ಕಠಿಣ ಕಾನೂನು ರೂಪಿಸುವಂತೆ ಆಗ್ರಹ

ಜಗಳೂರು, ಫೆ.2- ತಾಲ್ಲೂಕಿನಾ ದ್ಯಂತ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಗ್ರಾಹಕರಿಗೆ ನೀಡುತ್ತಿರುವ ಕಿರುಕುಳ ತಪ್ಪಿಸಬೇಕೆಂದು ಆಗ್ರಹಿಸಿ ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿಯಂತ್ರಣ ಮಂಡಳಿ ಸಂಸ್ಥೆ ವತಿಯಿಂದ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಈಗಾಗಲೇ ತಾಲ್ಲೂಕಿನಲ್ಲಿ ಬಹಳಷ್ಟು ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾಲ ನೀಡಿದ್ದು, ಸಾಲ ವಸೂಲಾತಿಗಾಗಿ ಆರ್.ಬಿ.ಐ ನಿಯಮಾವಳಿಗಳನ್ನು ಗಾಳಿಗೆ ತೂರಿ ಜನರಿಗೆ ಕಿರುಕುಳ ನೀಡುವ ಜತೆಗೆ ದೌರ್ಜನ್ಯ ನಡೆಸುತ್ತಿರುವ ಬಗ್ಗೆ ಹಲವೆಡೆ ವರದಿಯಾಗಿದೆ.

ಮೈಕ್ರೋ ಸಂಸ್ಥೆಗಳ ಕಿರುಕುಳದಿಂದ ಕೆಲವರು ಮನೆ ಬಿಟ್ಟು ತಲೆಮರೆಸಿಕೊಂಡು ಹೋಗಿರುತ್ತಾರೆ. ಇನ್ನೂ ಕೆಲವರು ಜಮೀನು ಮತ್ತು ಮನೆಗಳನ್ನು ಮಾರಾಟ ಮಾಡಿ ಸಾಲ ಕಟ್ಟಿರುತ್ತಾರೆ. ಸರ್ಕಾರ ಕೂಡಲೇ ಸುಗ್ರೀವಾಜ್ಞೆ ತಂದು ಕಾನೂನನ್ನು ಸೂಕ್ತವಾಗಿ ಜಾರಿಗೊಳಿಸಿ ನೊಂದ ಮಹಿಳೆಯರು ಮತ್ತು ಸಾಲ ಪಡೆದ ಗ್ರಾಹಕರಿಗೆ ಆತ್ಮಸ್ಥೈರ್ಯ ತುಂಬಬೇಕು ಮತ್ತು ಮೈಕ್ರೋ ಫೈನಾನ್ಸ್ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಸಂಸ್ಥೆಯ ಅಧ್ಯಕ್ಷ ಜಿ.ಟಿ ತಿಪ್ಪೇಸ್ವಾಮಿ, ಮಹಿಳಾ ಅಧ್ಯಕ್ಷೆ ಲೋಕಮ್ಮ, ವಿಶಾಲಾಕ್ಷಿ, ಲಕ್ಷ್ಮೀಬಾಯಿ, ಸಿದ್ದೇಶ್, ಎಂ.ಡಿ ಅಬ್ದುಲ್ ರಕೀಬ್ ಇತರರಿದ್ದರು.

error: Content is protected !!