ದಾವಣಗೆರೆ, ಫೆ. 2- ಮಹಾನಗರ ಪಾಲಿಕೆಯಲ್ಲಿ ಕಚೇರಿ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಮತಿ ಸುಜಾತ ಅಣ್ಣಿಗೇರಿ ಹಾಗೂ ಪೌರ ಕಾರ್ಮಿಕರಾದ ಶ್ರೀಮತಿ ರೇಣುಕಮ್ಮ, ಶ್ರೀಮತಿ ದಂಡ್ಯಮ್ಮ ಅವರುಗಳು ನಿನ್ನೆ ವಯೋನಿವೃತ್ತಿ ಹೊಂದಿದ್ದು, ಮಹಾನಗರ ಪಾಲಿಕೆ ನೌಕರರ ಸಂಘದ ವತಿಯಿಂದ ಸನ್ಮಾನಿಸಿ, ಬೀಳ್ಕೊಡಲಾಯಿತು.
ಸಂಘದ ಅಧ್ಯಕ್ಷ ಕೆ.ಎಸ್. ಗೋವಿಂದರಾಜು, ವಲಯ ಆಯುಕ್ತರಾದ ಶ್ರೀಮತಿ ನಾಗರತ್ನಮ್ಮ, ವ್ಯವಸ್ಥಾಪಕರಾದ ಟಿ.ಸಿ. ಬಸವರಾಜಯ್ಯ, ಸುರೇಶ್ ಪಾಟೀಲ್, ಶ್ರೀಮತಿ ಅಂಜಿನಮ್ಮ, ಬಿ. ನಾಗರಾಜ್, ಶ್ರೀಮತಿ ಮಂಜುಳಾದೇವಿ ಉಪಸ್ಥಿತರಿದ್ದರು.