ಈಶ್ವರಮ್ಮ ಶಾಲೆಯಲ್ಲಿ ನ್ಯಾಯಾಧೀಶರಾದ ಸಿ. ನಾಗೇಶ್
ದಾವಣಗೆರೆ, ಜ. 8- ವಿದ್ಯಾರ್ಥಿಗಳು ಪಠೇತರ ಚಟುವಟಿಕೆಗಳ ಜೊತೆಗೆ ನಿರಂತರವಾದ ಕಲಿಕೆಗೆ ಒತ್ತು ನೀಡಬೇಕು. ಕ್ರಮಬದ್ಧ ಅಭ್ಯಾಸ ವಿದ್ಯಾರ್ಥಿ ಜೀವನದ ಅಡಿಪಾಯವಾಗಿದೆ ಎಂದು ಹಿರಿಯ ನ್ಯಾಯಾಧೀಶರಾದ ಸಿ. ನಾಗೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಈಶ್ವರಮ್ಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಪ್ರತಿಭಾ ಪುರಸ್ಕಾರ ಮತ್ತು ವಾರ್ಷಿಕ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸ್ವಯಂ ಶಿಸ್ತು, ಸಮಯದ ಮಹತ್ವ, ಆತ್ಮವಿಶ್ವಾಸ ಬೆಳೆಸಿಕೊಂಡು ಉತ್ತಮ ಅಂಕ ಗಳಿಸಿ, ಪೋಷಕರಿಗೆ ಮತ್ತು ಶಿಕ್ಷಕರಿಗೆ ಸಮರ್ಪಿಸಬೇಕು ಎಂದರು.
ಇಂದಿನ ಶಿಕ್ಷಣವು ಕೇವಲ ಅಂಕ ಗಳಿಕೆಯ ಮಹತ್ವವನ್ನು ತಿಳಿಸುತ್ತಿದೆ. ಸಂಸ್ಕೃತಿ, ಸಂಸ್ಕಾರವನ್ನು ಬೆಳೆಸುವ ನಿಟ್ಟಿನಲ್ಲಿ ಶಿಕ್ಷಣ ಅಳವಡಿಕೆಯ ಬಗ್ಗೆ ಚಿಂತಿಸಬೇಕು. ಪೋಷಕರು ಸದಾ ಮಕ್ಕಳನ್ನು ಗಮನಿಸುತ್ತಿರಬೇಕು. ಇಂದಿನ ಸಾಮಾಜಿಕ ಜಾಲ ತಾಣ ಮಕ್ಕಳ ಮನಸ್ಸನ್ನು ವಿಚಲಿತಗೊಳಿಸಿ, ಮಕ್ಕಳು ಸಮಸ್ಯೆಗಳಿಗೆ ಸಿಲುಕಿ ವಿದ್ಯಾಭ್ಯಾಸ ಕುಂಠಿತ ಗೊಳಿಸುತ್ತಿದೆ ಎಂದರು. ಶಾಲಾಡಳಿತ ಕಾರ್ಯ ದರ್ಶಿ ಎ.ಆರ್.ಉಷಾರಂಗನಾಥ್ ಅಧ್ಯಕ್ಷತೆ ವಹಿಸಿದ್ದರು. ಖಜಾಂಚಿ ಎ.ಪಿ.ಸುಜಾತ, ಹಿರಿಯ ಸದಸ್ಯರಾದ ಕಾಸಲ್ ರತ್ನಮ್ಮ, ಉಪಪ್ರಾಂಶುಪಾಲ ರಾದ ಜಿ.ಎಸ್.ಶಶಿರೇಖಾ ಇದ್ದರು. ಶಾಲಾ ಪ್ರಾಂಶುಪಾಲ ಕೆ.ಎಸ್.ಪ್ರಭುಕುಮಾರ್ ಮಲ್ಟಿಮೀಡಿ ಯಾ ವರದಿ ಮಂಡಿಸಿದರು. ಕಂಪ್ಯೂಟರ್ ಶಿಕ್ಷಕಿ ಎ.ಎಚ್.ನಂದಾ ನಿರೂಪಿಸಿದರು. ನಂತರ `ಕಾಯಕ ಯೋಗಿಗೆ ನಮನ’ ಎಂಬ ಶೀರ್ಷಿಕೆಯಡಿ ಮಕ್ಕಳು ಮನರಂಜಿಸಿ, ಕಾರ್ಯಕ್ರಮ ನಡೆಸಿಕೊಟ್ಟರು.