ಹರಪನಹಳ್ಳಿ, ಡಿ. 30- ಹರಪನಹಳ್ಳಿ ತಾಲ್ಲೂಕು ಕೃಷಿಕ ಸಮಾಜದ ನೂತನ ಅಧ್ಯಕ್ಷರಾಗಿ ನೀಲಗುಂದದ ಎಸ್.ಮಡಿವಾಳಪ್ಪ ಹಾಗೂ ಉಪಾಧ್ಯಕ್ಷರಾಗಿ ಶಿಂಗ್ರಿಹಳ್ಳಿ ಸಿ.ವಿಜಯ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪಟ್ಟಣದ ಕೃಷಿ ಇಲಾಖೆಯಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ತಾಲ್ಲೂಕು ಕೃಷಿಕ ಸಮಾಜಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಸಹಾಯಕ ಕೃಷಿ ನಿರ್ದೇಶಕ ಉಮೇಶ್ ತಿಳಿಸಿದ್ದಾರೆ.
ತಾಲ್ಲೂಕು ಕೃಷಿಕ ಸಮಾಜದ ಎಲ್ಲಾ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಕ್ಯಾರಕಟ್ಟಿ ಕೆ.ಜಿ.ಶಿವಯೋಗಿ, ಖಜಾಂಚಿಯಾಗಿ ಶಿವಪುರದ ಜೆ.ಆರ್.ರವಿನಾಯ್ಕ್ ಹಾಗೂ ಜಿಲ್ಲಾ ಪ್ರತಿನಿಧಿಯಾಗಿ ರಾಗಿಮಸಲವಾಡದ ಕೆ.ರೇವಣಸಿದ್ದಪ್ಪ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು. ಯರಬಾಳು ಕ್ಷೇತ್ರದ ಪಟೇಲ್ ಗುರುಬಸವರಾಜ ಅವರು ಮಾತ್ರ ಗೈರಾಗಿದ್ದರು ಎಂದು ಉಮೇಶ್ ಹೇಳಿದರು.
ನೂತನ ಅಧ್ಯಕ್ಷ ನೀಲಗುಂದದ ಎಸ್.ಮಡಿವಾಳಪ್ಪ ಮಾತನಾಡಿ, ತಾಲ್ಲೂಕಿನ ಕೃಷಿಕ ಸಮಾಜದ ಪದಾಧಿಕಾರಿಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಕೃಷಿಕ ಸಮಾಜದ ಕಛೇರಿ ಕಟ್ಟಡಕ್ಕೆ ಭೂಮಿ ಪೂಜೆಯಾಗಿದ್ದು ಕಾಮಗಾರಿ ಪ್ರಾರಂಭ ವಿಳಂಬವಾಗಿದೆ. ಶಾಸಕರೊಂದಿಗೆ ಹಾಗೂ ಅಧಿಕಾರಿಗಳೊಂದಿಗೆ ಸಮಲೋಚನೆ ನಡೆಸಿ ಪೂರ್ಣಗೊಳಿಸಲು ಶ್ರಮಿಸುತ್ತೇನೆ ಎಂದರು.
ಕೃಷಿಕ ಸಮಾಜದ ನೂತನ ಕಾರ್ಯಕಾರಿ ಸಮಿತಿ ಸದಸ್ಯರಾದ ಮಾದಿಹಳ್ಳಿ ಬಕ್ಕೇಶ್ ಪಿ., ತೆಲಗಿ ಆರ್.ನಾಗರಾಜ, ಕುಂಚೂರು ಎ.ಕೊಟ್ರಪ್ಪ, ಜಂಗಂತುಂಬಿಗೆರೆ ಎಂ.ಶಂಕರಾನಂದ, ವಡ್ಡಿನಹಳ್ಳಿ ಡಿ.ಭರಮನಗೌಡ, ಇಟ್ಟಿಗುಡಿ ಹೆಚ್.ಶೇಖರಪ್ಪ, ಶಂಕರನಹಳ್ಳಿ ಎಸ್.ಹೆಚ್.ಆನಂದಪ್ಪ, ರಾಮಘಟ್ಟದ ಎ.ನಾರಪ್ಪ, ಅಣಜಿಗೆರೆ ಕೆ.ನರೇಂದ್ರ ಹಾಗೂ ಬಿಜೆಪಿ ಮುಖಂಡರಾದ ನವೀನ್ ಪಾಟೀಲ್, ಮಹೇಶ ಪೂಜಾರ ಹಾಗೂ ಇತರರು ಹಾಜರಿದ್ದರು.