ಜಿ. ಮಲ್ಲಿಕಾರ್ಜುನಪ್ಪ ಸ್ಮರಣಾರ್ಥ ಬಾಸ್ಕೆಟ್ ಬಾಲ್ ಪಂದ್ಯಾವಳಿಗೆ ಚಾಲನೆ

ಜಿ. ಮಲ್ಲಿಕಾರ್ಜುನಪ್ಪ ಸ್ಮರಣಾರ್ಥ ಬಾಸ್ಕೆಟ್ ಬಾಲ್ ಪಂದ್ಯಾವಳಿಗೆ ಚಾಲನೆ

ದಾವಣಗೆರೆ, ನ.29-  ನಗರದ ಜಿಎಂ ವಿಶ್ವವಿದ್ಯಾಲ ಯದ ಬಾಸ್ಕೆಟ್ ಬಾಲ್ ಆಟದ ಅಂಗಳದಲ್ಲಿ ಹಮ್ಮಿಕೊಳ್ಳ ಲಾಗಿರುವ ಎರಡು ದಿನಗಳ ಜಿ. ಮಲ್ಲಿಕಾರ್ಜುನಪ್ಪ  ಸ್ಮರಣಾರ್ಥ ರಾಜ್ಯ ಮಟ್ಟದ   ಹೊನಲು ಬೆಳಕಿನ ಬಾಸ್ಕೆಟ್ ಬಾಲ್ ಪಂದ್ಯಾವಳಿಗೆ  ಜಿಎಂ ವಿವಿ ಕುಲಪತಿ  ಡಾ. ಎಸ್.ಆರ್. ಶಂಕಪಾಲ್ ಅವರು  ಚಾಲನೆ ನೀಡಿದರು. 

ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಎರಡರಲ್ಲೂ ನಿಮ್ಮ ಭವಿಷ್ಯ ಅಡಗಿದೆ.  ತಮ್ಮಲ್ಲಿರುವ ಪ್ರತಿಭೆ ಪ್ರದರ್ಶಿಸಿ,   ಸಾಧನೆ ಮಾಡಬೇಕು ಎಂದು  ಶಂಕಪಾಲ್  ಅವರು ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದರು.

ನಗರದ ಎಸ್ಎಸ್ಐಎಂಎಸ್, ವಿವಿಸಿಇ ಮೈಸೂರು ತಂಡಗಳ ನಡುವೆ ಮೊದಲ ಪಂದ್ಯಾಟದ ಹಣಾಹಣಿ ನಡೆಯಿತು.  ದಾವಣಗೆರೆ ಸೇರಿದಂತೆ ಹಾಸನ, ಮೈಸೂರು, ಧಾರವಾಡ, ಮಡಿಕೇರಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ವೈದ್ಯಕೀಯ, ಇಂಜಿನಿಯರಿಂಗ್, ದಂತ ವೈದ್ಯಕೀಯ ಸೇರಿದಂತೆ ಎಲ್ಲ ಪದವಿ ಕಾಲೇಜುಗಳಿಂದ ಸುಮಾರು 30 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿವೆ. 

ವಿಜೇತರಾದ ಪುರುಷ ವಿಭಾಗಕ್ಕೆ ಮೊದಲ ಬಹುಮಾನ  20,000 ನಗದು ಮತ್ತು ಆಕರ್ಷಕ ಟ್ರೋಫಿ ಹಾಗೂ ಎರಡನೇ ಬಹುಮಾನ  10,000 ನಗದು,  ಟ್ರೋಫಿ. ಮಹಿಳಾ ವಿಭಾಗಕ್ಕೆ ಮೊದಲ ಬಹುಮಾನ 10,000 ನಗದು,  ಟ್ರೋಫಿ ಹಾಗೂ ಎರಡನೇ  ಬಹುಮಾನ  7,500 ನಗದು ಮತ್ತು  ಟ್ರೋಫಿ ನೀಡ ಲಾಗುತ್ತಿದೆ.

error: Content is protected !!