ಜಿಲ್ಲಾ ಕ್ರೀಡಾಂಗಣದಲ್ಲಿ ದಿ|| ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸ್ಮರಣಾರ್ಥ ಇಂದು ಶನಿವಾರ ಸಂಜೆ 7ಕ್ಕೆ ಭಾರತ ಇಲೆವೆನ್ (ಕರ್ನಾಟಕ ತಂಡ) ಹಾಗೂ ಶ್ರೀಲಂಕಾ ಇಲೆವೆನ್ ತಂಡಗಳ ಮಧ್ಯೆ ಕ್ರಿಕೆಟ್ ಪಂದ್ಯ ನಡೆಯಲಿದೆ. ಜಿಲ್ಲಾ ಕ್ರೀಡಾಂಗಣದಲ್ಲಿ ಇಂದು ಶನಿವಾರ ನಡೆಯುವ ಕ್ರಿಕೆಟ್ ಪಂದ್ಯಾವಳಿಯಲ್ಲಿ ಚನೈ (ತಮಿಳುನಾಡು) ಡ್ರಿಮ್ ಇಲವೆನ್ಸ್, ಶ್ರೀಲಂಕಾ (ದಕ್ಷಿಣ ಶ್ರೀಲಂಕಾ), ಕೊಡಗು, ಬೆಂಗಳೂರು – 15 ತಂಡ ಗಳು, ಹಾಸನ, ಉಡುಪಿ, ಮಂಗಳೂರು, ತುರುವೆಕೆರೆ, ಹಿರಿಯೂರು, ಪಾಂಡವ ಪುರ, ಸಕಲೇಶಪುರ, ಮಂಗಳೂರು, ಕೋಟಾ, ನಂಜನಗೂಡು, ರಂಗನಕೆರೆ, ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ-15 ತಂಡಗಳು ಸೆಣಸಾಟ ನಡೆಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಇದೇ ಮೊದಲ ಬಾರಿಗೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ಅಂತಾ ರಾಷ್ಟ್ರೀಯ ಕ್ರಿಕೆಟ್ ಪಂದ್ಯಕ್ಕೆ ಚಾಲನೆ ನೀಡಿ, ಇಂದು ಮತ್ತು ನಾಳಿನ ಪಂದ್ಯಾವಳಿಗಳನ್ನು ವೀಕ್ಷಿಸಲಿದ್ದಾರೆ.
ಕ್ರಿಕೆಟ್ ಪಂದ್ಯವು ನಾಳೆ ಭಾನುವಾರ ಮಧ್ಯರಾತ್ರಿ ಮುಗಿಯಲಿದೆ ಎಂದು ಕ್ರಿಕೆಟ್ ಸಂಘಟಕರಾದ ಜಯಪ್ರಕಾಶ್ ಗೌಡ (ಕುಬೇರ), ಕುರುಡಿ ಗಿರೀಶ್ ಸ್ವಾಮಿ ತಿಳಿಸಿದ್ದಾರೆ.