ನಗರದಲ್ಲಿ ಇಂದು ತಾ.ಕಸಾಪ ವತಿಯಿಂದ ದತ್ತಿ ಉಪನ್ಯಾಸ

ನಗರದಲ್ಲಿ ಇಂದು ತಾ.ಕಸಾಪ ವತಿಯಿಂದ ದತ್ತಿ ಉಪನ್ಯಾಸ

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು  ವತಿಯಿಂದ ಶಾಲಾ-ಕಾಲೇಜು ಅಂಗಳ ದಲ್ಲಿ ಸಾಹಿತ್ಯೋತ್ಸವದ ಅಂಗ ವಾಗಿ ಶ್ರೀ ದುರ್ಗಾಂಭಿಕಾ ಪ್ರೌಢಶಾಲೆಯಲ್ಲಿ ಇಂದು ಬೆಳಿಗ್ಗೆ 11 ಗಂಟೆಗೆ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ದುರ್ಗಾಂಭಿಕಾ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಆರ್‌. ಪ್ರಭು ವಹಿಸಲಿದ್ದಾರೆ. ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಭರಮಪ್ಪ ಮೈಸೂರು ಇವರು `ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯಗಳ’ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.

ಮುಖ್ಯ ಅತಿಥಿಗಳಾಗಿ ತಾಲ್ಲೂಕು ಕ.ಸಾ.ಪ. ದಾವಣಗೆರೆ ಅಧ್ಯಕ್ಷರಾದ ಶ್ರೀಮತಿ ಸುಮತಿ ಜಯಪ್ಪ, ನಿರ್ದೇಶಕರಾದ ಶ್ರೀಮತಿ ಕೆ.ಜಿ. ಸೌಭಾಗ್ಯ ಮತ್ತು ಆರ್‌.ಶಿವಕುಮಾರ್‌ ಆಗಮಿಸುವರು. ದಾವಣಗೆರೆ ತಾ|| ಕಸಾಪ ನಿರ್ದೇಶಕ ಷಡಕ್ಷರಪ್ಪ ಎಂ. ಬೇತೂರು ಪ್ರಾಸ್ತಾವಿಕ ನುಡಿಗಳನ್ನಾಡುವರು.

error: Content is protected !!