ಮಲೇಬೆನ್ನೂರು, ನ.25- ರಾಜ್ಯಾದ್ಯಂತ ಟಗರಿನ ಕಾಳಗದಲ್ಲಿ ಭಾರೀ ಹೆಸರು ಮಾಡಿದ್ದ ಬೆಳ್ಳೂಡಿ ಗ್ರಾಮದ `ಕಾಳಿ’ ಟಗರು ಸೋಮವಾರ ಅನಾರೋಗ್ಯದಿಂದ ಮೃತಪಟ್ಟಿದೆ ಎನ್ನಲಾಗಿದೆ. ಸೋಲನ್ನೇ ಕಾಣದ ಕಾಳಿ ಟಗರು ಇದುವರೆಗೂ ನೂರಾರು ಟಗರಿನ ಕಾಳಗದಲ್ಲಿ ಭಾಗವಹಿಸಿ, ಸಾಕಷ್ಟು ಬಹುಮಾನ ಗೆದ್ದಿದೆ. ಬೆಳ್ಳೂಡಿ ಸೇರಿದಂತೆ ಜಿಲ್ಲೆ ಮತ್ತು ರಾಜ್ಯದ ವಿವಿಧ ಭಾಗಗಳಿಂದ ಅಪಾರ ಜನ ಬೆಳ್ಳೂಡಿಗೆ ಬಂದು ಮೃತ ಕಾಳಿ ಟಗರಿನ ಅಂತಿಮ ದರ್ಶನ ಪಡೆದರು.
December 6, 2024