ರಾಷ್ಟ್ರಮಟ್ಟದ ವಿಚಾರ ಸಂಕಿರಣದ ಸಮಾರೋಪದಲ್ಲಿ ವಿರುಪಾಕ್ಷಿ ಪೂಜಾರಹಳ್ಳಿ
ಹರಪನಹಳ್ಳಿ, ನ. 7- ಹೈದರಾಬಾದ್ ಕರ್ನಾಟಕದ ಸರ್ವತೋಮುಖ ಅಭಿವೃದ್ಧಿಗೆ ನಂಜುಂಡಪ್ಪ ವರದಿ ಸಹಕಾರಿಯಾಗಿದೆ ಎಂದು ಹಂಪಿ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದ ಹಿರಿಯ ಪ್ರಾಧ್ಯಾಪಕ ವಿರುಪಾಕ್ಷಿ ಪೂಜಾರಹಳ್ಳಿ ಹೇಳಿದರು.
ತಾಲ್ಲೂಕಿನ ಅರಸೀಕೆರೆ ಗ್ರಾಮದ ವೈ. ಅಣ್ಣಪ್ಪ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾನವಶಾಸ್ತ್ರ ವಿಭಾಗದ ಸಹಯೋಗದಲ್ಲಿ `ಕಲ್ಯಾಣ ಕರ್ನಾಟಕದ ಹಿಂದುಳಿದ ವರ್ಗಗಳ ಸಮಸ್ಯೆ ಮತ್ತು ಸವಾಲುಗಳು’ ಕುರಿತು ರಾಷ್ಟ್ರಮಟ್ಟದ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ರೈತರ ಆರ್ಥಿಕತೆ ಪ್ರಗತಿಗೆ ಅಗತ್ಯವಾದ ಯೋಜನೆಗಳನ್ನು ಜಾರಿಗೆ ತಂದು ಹಿಂದುಳಿದ ವರ್ಗಗಳ ಅಭಿವೃದ್ಧಿ ಶ್ರಮಿಸಬೇಕು. ಅಸ್ಪೃಶ್ಯತೆ, ಮೂಢ ನಂಬಿಕೆಗಳಿಂದಾಗಿ ಸಮಾಜ ಹಿಂದುಳಿದಿದೆ. ಸಮಾಜದ ಪರಿವರ್ತನೆಗೆ ಶಿಕ್ಷಣ ಅಗತ್ಯ ಎಂದರು.
ಸಂಡೂರು ಪ್ರಭುದೇವ ಸ್ವಾಮೀಜಿ ಆಶೀರ್ವಚನ ನೀಡಿ, ‘ವಚನ ಸಾಹಿತ್ಯ, ಬಂಡಾಯ ಸಾಹಿತ್ಯ ಸೇರಿದಂತೆ ಶ್ರೀಮಂತ ಸಾಹಿತ್ಯಕ್ಕೆ ಕಲ್ಯಾಣ ಕರ್ನಾಟಕ ದೇಶಕ್ಕೆ ದೊಡ್ಡ ಕೊಡುಗೆ ನೀಡಿದೆ. ಆದರೆ ಅಭಿವೃದ್ಧಿ ಹಿನ್ನಡೆಯನ್ನು ಅವಲೋಕಿಸಿ ಸರ್ಕಾರ ಅಭಿವೃದ್ಧಿ ಪಡಿಸಬೇಕು.
ಕಲ್ಯಾಣ ಕರ್ನಾಟಕದಲ್ಲಿ ಜೀತ ಪದ್ಧತಿಯಂತೆ ಖಾಸಗಿ ಶಿಕ್ಷಣ ಸಂಸ್ಥೆಗಳು ಕಾರ್ಯ ನಿರ್ವಹಿ ಸುತ್ತಿವೆ. ಶಾಲೆಗಳಿಗೆ ಈಗಾಗಲೇ ಸರ್ಕಾರದ ಅನುದಾನಗಳು ಇಲ್ಲ. ಮುಂದಿನ 10 ವರ್ಷದ ಅವಧಿಯಲ್ಲಿ ಶಾಲೆಗಳು ಖಾಸಗಿ ವ್ಯಕ್ತಿ ಪಾಲಾಗಲಿದ್ದು, ಹಣ ನೀಡಿ ಶಿಕ್ಷಣ ಪಡೆಯುವ ದಿನಮಾನಗಳು ದೂರ ಇಲ್ಲ. ವಿಶ್ವವಿದ್ಯಾಲಯಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ಹೊರತಾಗಿಲ್ಲ ಎಂದ ಅವರು, ಹಂಪಿ ವಿಶ್ವವಿದ್ಯಾಲಯದಲ್ಲಿ ಜನಪದ ಅಧ್ಯಯನ ಕೇಂದ್ರ ಸ್ಥಾಪನೆ ಆಗಬೇಕು ಎಂದರು.
ಉದ್ಯಮಿ ಪ್ರಶಾಂತ್ ಪಾಟೀಲ್ ಮಾತ ನಾಡಿ, ಬಡತನ, ಅನಕ್ಷರತೆಯಿಂದ ಸರ್ಕಾರದ ಯೋಜನೆಗಳು ಜನರಿಗೆ ತಲುಪಿತ್ತಿಲ್ಲ. ಬದಲಾಗಿ ಉಳ್ಳವರ ಪಾಲಾಗುತ್ತಿದೆ. ಅವುಗಳನ್ನು ಪಡೆ ಯಲು ಹೋರಾಟ ನಡೆಸುವುದು ಅನಿವಾರ್ಯ ವಾಗಿದೆ. ಶಿಕ್ಷಣದ ಹೊಣೆಗಾರಿಕೆಯನ್ನು ಮಠ, ಮಾನ್ಯಗಳು ಹೊತ್ತುಕೊಂಡು ಸಮುದಾಯದ ಅಭಿವೃದ್ಧಿಗೆ ಸಹಕರಿಸುತ್ತಿದೆ. ಜಾತಿ ವ್ಯವಸ್ಥೆಗೆ ಸಂಪೂರ್ಣ ಕಡಿವಾಣಕ್ಕೆ ಶಿಕ್ಷಣ ಅಗತ್ಯ ಎಂದರು.
ಈ ಸಂದರ್ಭದಲ್ಲಿ ಮಾನವಶಾಸ್ತ್ರ ವಿಭಾಗದ ಮುಖ್ಯಸ್ಥ ತಾರಿಹಳ್ಳಿ ಹನುಮಂತಪ್ಪ ಪ್ರಾಂಶುಪಾಲ ಡಾ.ಎಂ ಸುರೇಶ್, ಉಮೇಶ್, ಡಾ.ಹಾದಿಮನೆ ರಮೇಶ್, ಡಿ.ಹನುಮಂತಪ್ಪ ಸೇರಿದಂತೆ ಇತರರು ಇದ್ದರು.