ಜಗಳೂರು, ಸೆ.27- ತಾಲ್ಲೂಕು ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಪಟ್ಟಣದ ಬಾಲ ಭಾರತಿ ಪ್ರೌಢಶಾಲೆಯ ಬಾಲಕಿಯರು `ಬಾಲ್ ಬ್ಯಾಡ್ಮಿಂಟನ್’ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವ ಪ್ರತೀಕ್ಷ, ನಿವೇದಿತ, ಭಾವನ, ಸಂಧ್ಯಾ, ಕೃತಿಕ, ಲೇತಾಜ್ ಬಾನು ವಿದ್ಯಾರ್ಥಿನಿಯರಿಗೆ ಅಮರಭಾರತಿ ವಿದ್ಯಾಕೇಂದ್ರದ ಆಡಳಿತಾಧಿಕಾರಿ ಹಾಗೂ ಮುಖ್ಯ ಶಿಕ್ಷಕರಾದ ಶ್ರೀಮತಿ ವಿ.ಹೆಚ್. ಶ್ವೇತಾ ಅಭಿನಂದಿಸಿದ್ದಾರೆ.
January 22, 2025