ಶಿಸ್ತು ಬದ್ದವಾಗಿ ರಾಜ್ಯೋತ್ಸವ ಆಚರಿಸಲು ಸಲಹೆ

ಶಿಸ್ತು ಬದ್ದವಾಗಿ ರಾಜ್ಯೋತ್ಸವ ಆಚರಿಸಲು ಸಲಹೆ

ಹರಿಹರದಲ್ಲಿನ   ಪೂರ್ವಭಾವಿ ಸಭೆಯಲ್ಲಿ ಶಾಸಕ ಬಿ.ಪಿ. ಹರೀಶ್

ಹರಿಹರ, ಅ.23- ನವೆಂಬರ್ 1ರಂದು  ಕನ್ನಡ ರಾಜ್ಯೋತ್ಸವವನ್ನು ಎಲ್ಲಾ ಇಲಾಖೆ  ಅಧಿ ಕಾರಿಗಳು, ಜವಾಬ್ದಾರಿಯಿಂದ, ಶಿಸ್ತು ಬದ್ದವಾಗಿ ಮತ್ತು ಸಡಗರ, ಸಂಭ್ರಮದಿಂದ ಆಚರಣೆ ಮಾಡುವಂತೆ ಶಾಸಕ ಬಿ.ಪಿ. ಹರೀಶ್ ಹೇಳಿದರು.

ನಗರದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ನಿನ್ನೆ ಜರುಗಿದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

 ಮೆರವಣಿಗೆ ಮಾರ್ಗದಲ್ಲಿ ಕನ್ನಡ ಧ್ವಜಗಳನ್ನು ಕಟ್ಟುವ ಮೂಲಕ ನಗರವನ್ನು  ಶೃಂಗರಿಸಬೇಕು. ಶಿಕ್ಷಣ, ತೋಟಗಾರಿಕೆ, ಕೃಷಿ ಸೇರಿದಂತೆ ವಿವಿಧ ಇಲಾಖೆಯ ವತಿಯಿಂದ ರೈತರಿಗೆ, ಮಕ್ಕಳಿಗೆ ಮತ್ತು ಸಾರ್ವಜನಿಕರಿಗಾಗಿ ನಾಡಿನ ಇತಿಹಾಸ ಮತ್ತು ಪರಂಪರೆಯ  ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ವಿವಿಧ ರಂಗಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ   ಸಾಧಕರನ್ನು ಗುರುತಿಸಿ ಸನ್ಮಾನಿಸ ಬೇಕು.   ತಾಲ್ಲೂಕಿನ ಎಲ್ಲಾ ಇಲಾಖೆಯ ಅಧಿಕಾರಿ ಗಳ ಜೊತೆಗೆ ಸಿಬ್ಬಂದಿಗಳು ಮತ್ತು ಶಾಲಾ ಶಿಕ್ಷಕರು ಕಡ್ಡಾಯವಾಗಿ ಪಾಲ್ಗೊಂಡು ಸಮಾರಂಭವನ್ನು ಯಶಸ್ವಿಗೊಳಿಸಲು ಕರೆ ನೀಡಿದರು.

ತಹಶೀಲ್ದಾರ್ ಗುರುಬಸವರಾಜ್ ಮಾತ ನಾಡಿ, ರಾಜ್ಯೋತ್ಸವ ಸಮಾರಂಭಕ್ಕೂ ಮುನ್ನ ಹರಿಹರೇಶ್ವರ ದೇವಾಲಯದ ಮುಂಭಾಗದಿಂದ ಭುವನೇಶ್ವರಿ ಭಾವಚಿತ್ರದ ಮೆರವಣಿಗೆ ವಿವಿಧ ಕಲಾ ಮೇಳಗಳೊಂದಿಗೆ ನಡೆಯಲಿದೆ.  ನಂತರ ಗಾಂಧಿ ಮೈದಾನದಲ್ಲಿ ವೇದಿಕೆ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಿಕ್ಷಣಾಧಿಕಾರಿ ಡಿ.ದುರ್ಗಪ್ಪ, ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ, ತೋಟಗಾರಿಕೆ ಇಲಾಖೆ ಶಶಿಧರಯ್ಯ, ಆರೋಗ್ಯ ಇಲಾಖೆ ಅಬ್ದುಲ್ ಖಾದರ್, ತಾಪಂ ಇಲಾಖೆ ಕರಿಬಸಪ್ಪ, ಕಾರ್ಮಿಕ ಇಲಾಖೆ ಜೆ. ಕವಿತಾ ಕುಮಾರಿ, ಬಿ.ಸಿ.ಎಂ. ಇಲಾಖೆ ಆಸ್ಮಾಬಾನು, ಮೀನುಗಾರಿಕೆ ಇಲಾಖೆ ಶಶಿಕುಮಾರ್, ಸಿಡಿಪಿಓ ಇಲಾಖೆ ರಶೀದಬಾನು, ಪಶು ಇಲಾಖೆ ಟಿ.ಕೆ ಸಿದ್ದೇಶ್, ಶಿಕ್ಷಣ ಇಲಾಖೆ ಆರ್, ಕೃಷ್ಣಪ್ಪ ಇತರರಿದ್ದರು.

error: Content is protected !!