ದಾವಣಗೆರೆ, ಅ. 17 – ಸತತವಾಗಿ ಸುರಿಯುತ್ತಿರುವ ಮಳೆಯಿಂದ ಮನೆಗಳಿಗೆ ನುಗ್ಗಿ ರಾತ್ರಿಯೆಲ್ಲಾ ಜನರು ನೀರನ್ನು ತೆಗೆದುಹಾಕುವಲ್ಲಿ ತುಂಬಾ ತೊಂದರೆ ಅನುಭವಿಸಿದರು. ಸ್ಥಳಕ್ಕೆ ಭೇಟಿ ನೀಡಿದ್ದ ಲತಿಕಾ ದಿನೇಶ್ ಕೆ. ಶೆಟ್ಟಿ ಅವರು ಜನರ ಸಮಸ್ಯೆಯನ್ನು ಆಲಿಸಿದರು. ಮಹಾಪೌರರಾದ ಕೆ. ಚಮನ್ ಸಾಬ್ ಅವರೊಂದಿಗೆ ಮಾತನಾಡಿದ ಅವರು, ತೊಂದರೆ ಬಗ್ಗೆ ತಿಳಿಸಿ ಶೀಘ್ರ ಪರಿಹಾರ ನೀಡಲು ಒತ್ತಾಯಿಸಿದರು. ಈ ಸಂದರ್ಭದಲ್ಲಿ ವಾರ್ಡಿನ ಕಾಂಗ್ರೆಸ್ ಅಧ್ಯಕ್ಷರಾದ ಮಧು ಪವಾರ್ ಪರಶುರಾಮ್ ಶ್ರೀಕಾಂತ್ ಬಗರೆ ಯುವರಾಜ್ ಇನ್ನು ಮುಂತಾದವರಿದ್ದರು.
January 9, 2025