ಪ್ರಗತಿಯ ಪಥದಲ್ಲಿ ಮಹಾಲಕ್ಷ್ಮಿ ಕ್ರೆಡಿಟ್ ಸೊಸೈಟಿ

ಪ್ರಗತಿಯ ಪಥದಲ್ಲಿ ಮಹಾಲಕ್ಷ್ಮಿ ಕ್ರೆಡಿಟ್ ಸೊಸೈಟಿ

ದಾವಣಗೆರೆ, ಅ.7-ನಗರದ  ಮಹಾಲಕ್ಷ್ಮಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ಈ ಸಾಲಿನಲ್ಲಿಯೂ ಉತ್ತಮ ವ್ಯವಹಾರ ನಡೆಸಿ 10 ಲಕ್ಷಕ್ಕೂ  ಹೆಚ್ಚು ರೂ. ಲಾಭ ಗಳಿಸಿರುತ್ತದೆ ಎಂದು ಸಂಘದ ಅಧ್ಯಕ್ಷ ಎ.ಪಿ. ಷಡಾಕ್ಷರಪ್ಪ ಸಂತಸ ವ್ಯಕ್ತಪಡಿಸಿದರು.

ನಗರದ ವಿದ್ಯಾನಗರ ಲಯನ್ಸ್ ಸೇವಾ ಭವನದಲ್ಲಿ ಮೊನ್ನೆ ನಡೆದ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಘದ ಪ್ರಗತಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತಾ ಈ ಬಾರಿಯೂ ಶೇ. 10 ರಂತೆ ಲಾಭಾಂಶ ನೀಡಲಾಗುವುದು ಎಂದು ಸಂಘದ ಸದಸ್ಯರ ಚಪ್ಪಾಳೆಗಳ ಮಧ್ಯೆ  ಘೋಷಿಸಿದರು.  

ಚಿ. ಶ್ರೀಅಶ್ವಿನ್ ಪ್ರಾರ್ಥನೆ ನಂತರ ಆಡಳಿತ ಮಂಡಳಿ ಸದಸ್ಯರುಗಳು ಜ್ಯೋತಿ ಬೆಳಗಿಸುವುದರ ಮೂಲಕ ಮಹಾಸಭೆಯನ್ನು ಪ್ರಾರಂಭಿಸಿದರು. ಸಂಘದ ಕಾರ್ಯದರ್ಶಿ ಎಸ್. ಬಸವರಾಜ್  ಸ್ವಾಗತಿಸಿದರು. ನಿರ್ದೇಶಕ ಸಿ. ಸುಭಾಷ್  ವಾರ್ಷಿಕ ಮಹಾಸಭೆಯ ಆಹ್ವಾನ ಪತ್ರಿಕೆ ಓದಿದರು. ಸಂಘದ ಸಿಬ್ಬಂದಿ  ಹೆಚ್.ಪಿ.ಜಿ. ಚಂದ್ರಕಾಂತ್ ಹಿಂದಿನ ಸಭೆಯ ನಡಾವಳಿಗಳನ್ನು ಓದಿದರು. 2023-24 ನೇ ಸಾಲಿನ ಆಡಿಟ್ ಆದ ಲೆಕ್ಕ ಪತ್ರಗಳನ್ನು ಮತ್ತು 2024-25 ನೇ ಸಾಲಿನ ಮುಂಗಡ ಪತ್ರವನ್ನು ಸಂಘದ ಕಾರ್ಯದರ್ಶಿ ಎಸ್. ಬಸವರಾಜ್ ಮಂಡಿಸಿದರು.

ಈ ಬಾರಿಯೂ ಸಂಘದ ಸದಸ್ಯರ ಮಕ್ಕಳಿಗೆ ನೀಡುವ ಪ್ರತಿಭಾ ಪುರಸ್ಕಾರ ಯೋಜನೆಯಂತೆ ಈ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅಧಿಕ ಅಂಕಗಳನ್ನು ಪಡೆದ ಚಿ. ಕೆ.ಎಂ. ದೀಪಕ್ ಗೌಡ ಅವರಿಗೆ ಪ್ರಥಮ ಬಹುಮಾನ ರೂ. 4,000/- ಹಾಗೂ ಚಿ.ರವಿಕಿರಣ್ ಸಿ.ಕೆ. ಇವರಿಗೆ ದ್ವಿತೀಯ ಬಹುಮಾನ ರೂ. 3,000/-, ದ್ವಿತೀಯ ಪಿ.ಯು.ಸಿ. ಯಲ್ಲಿ ಕು. ಮೇಘನ ಎಸ್. ಇವರಿಗೆ ಪ್ರಥಮ ಬಹುಮಾನ ರೂ. 5,000/-, ಕು. ಕೃತಿಕಾ ಜಿ.ಎ. ಅವರಿಗೆ ದ್ವಿತೀಯ ಬಹುಮಾನ ರೂ. ,4000/- ಮತ್ತು ಚಿ. ಯಶವಂತ್ .ವಿ. ಇವರಿಗೆ ತೃತೀಯ ಬಹುಮಾನ ರೂ. 3,000/- ನಗದು ನೀಡಿ ಗೌರವಿಸಲಾಯಿತು.

ವೇದಿಕೆ ಮೇಲೆ ಉಪಾಧ್ಯಕ್ಷ  ಹೆಚ್.ಡಿ. ಪ್ರಭುದೇವ್, ನಿರ್ದೇಶಕರುಗಳಾದ  ಕೆ.ಎನ್. ಶಿವಲಿಂಗಪ್ಪ ಬಾಡ, ಬಿ.ಬಿ. ರಾಮಚಂದ್ರ,  ಬಿ.ಎನ್. ರೇವಣಸಿದ್ದಪ್ಪ (ಬಾಳೆಹೊಲದ ಸಿದ್ದಣ್ಣ), ಟಿ.ಎಂ. ಮುರುಗೇಂದ್ರಯ್ಯ, ಶ್ರೀಮತಿ ಮಮತ ಕೆ.ಎಂ. ವಿಶ್ವನಾಥ, ಶ್ರೀಮತಿ ಕೆ.ವಿ. ನೇತ್ರಾವತಿ ಗುರುಮೂರ್ತಿ, ವಿಶೇಷ ಆಹ್ವಾನಿತರಾದ  ಹೆಚ್.ಎಸ್. ಬಸವಂತಪ್ಪ ಉಪಸ್ಥಿತರಿದ್ದರು.

ಕಾರ್ಯದರ್ಶಿ ಎಸ್.ಬಸವರಾಜ್ ವಂದಿಸಿ ದರು. ಸಂಘದ ಹಿರಿಯ ಸದಸ್ಯರಾದ ಬಿ.ಎಸ್. ಬಸವರಾಜ್ ಕಾರ್ಯಕ್ರಮ ನಿರೂಪಿಸಿದರು.

ಸಂಘದ ಸಿಬ್ಬಂದಿ ಕು|| ಫಿಲೋಮಿನಾ ಮೇರಿ, ಎಸ್. ಅಶೋಕ್ ಮತ್ತು ಸದಸ್ಯರುಗಳಾದ ಬಿ. ಧರ್ಮರಾಜ್, ಜಿ. ಗುರುಮೂರ್ತಿ ಮತ್ತಿತ ರರು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದರು.

error: Content is protected !!