ಶಾಮನೂರು ಜನತಾ ಕಾಲೋನಿಯ ಶ್ರೀ ಮಾಲಸಾಂಬ ಗಂಗಮಾಳಮ್ಮ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ 9.05ಕ್ಕೆ ಶ್ರೀ ದೇವಿಗೆ ಅಭಿಷೇಕ, ನಂತರ ಬೆಣ್ಣೆ ಪೂಜೆ ನಡೆಯಲಿದೆ. ನಾಳೆ ಗುರುವಾರ ಬೆಳಿಗ್ಗೆ ಗಣ ಹೋಮ, ಸಂಜೆ ದೀಪಾರಾಧನೆ ಜರುಗಲಿದೆ. ಪ್ರತಿದಿನ ಸಂಜೆ ದೇವಿಯ ಪುರಾಣ ಪ್ರವಚನವಿರುತ್ತದೆ ಎಂದು ಮಾಲಸಾಂಬ ಗಂಗಮಾಳಮ್ಮ ದೇವಸ್ಥಾನ ಸಮಿತಿ ಅಧ್ಯಕ್ಷ ಬಿ.ಜೆ. ವಿನಾಯಕ, ಕಾರ್ಯದರ್ಶಿ ಸುರೇಶ್ ಚವ್ಹಾಣ್ ತಿಳಿಸಿದ್ದಾರೆ.
October 9, 2024