ಶ್ರೀ ದಾನಮ್ಮ ದೇವಸ್ಥಾನದಲ್ಲಿ ನಾಳೆ ಮಹಾನವಮಿ ಅಮಾವಾಸ್ಯೆ

ಶ್ರೀ ದಾನಮ್ಮ ದೇವಸ್ಥಾನದಲ್ಲಿ ನಾಳೆ ಮಹಾನವಮಿ ಅಮಾವಾಸ್ಯೆ

ದಾವಣಗೆರೆ, ಸೆ. 30- ನಗರದ ದೊಡ್ಡಪೇಟೆಯಲ್ಲಿರುವ ಶ್ರೀ ಬಸವೇಶ್ವರ ಮತ್ತು ಶ್ರೀ ದಾನಮ್ಮ ದೇವಿ ದೇವಸ್ಥಾನ ದಲ್ಲಿ ಮಹಾನವಮಿ ಅಮಾವಾಸ್ಯೆ ಪ್ರಯುಕ್ತ ನಾಡಿದ್ದು ದಿನಾಂಕ 2ರ ಬುಧವಾರ ಬೆಳಿಗ್ಗೆ ಶ್ರೀ ಸ್ವಾಮಿಗೆ ಅಭಿಷೇಕ, ಪೂಜೆ, ಹೂವಿನ ಅಲಂಕಾರ ನಡೆಯಲಿದೆ. ನಂತರ ಮಧ್ಯಾಹ್ನ 12.30ಕ್ಕೆ ಸರ್ವ ಭಕ್ತಾದಿಗಳಿಗೆ ದಾಸೋಹ ಏರ್ಪಡಿಸಲಾಗಿದೆ.

ಬೇತೂರು ಶ್ರೀಮತಿ ಪುಷ್ಪಲತಾ ಕರಿಬಸಪ್ಪ, ಸೋಮಶೇಖರ, ದೇವರಮನಿ ರತ್ನಮ್ಮ ಮಹಾರುದ್ರಪ್ಪ ಮತ್ತು ಮಕ್ಕಳು, ಅಮೃತ್, ಕಾರ್ತಿಕ್, ಕೊಟ್ರಮ್ಮ ಹಾಗೂ ಕುಟುಂಬ, ಶ್ರೀಮತಿ ಎಮ್ಮಿ ಗಿರಿಜಮ್ಮ ಬಸವರಾಜಪ್ಪ ಮತ್ತು ಕುಟುಂಬದವರು ದಾಸೋಹದ ಸೇವಾರ್ಥಿಗಳಾಗಿದ್ದಾರೆ.

error: Content is protected !!