ಮಲೇಬೆನ್ನೂರು : ಕುಂಬಳೂರು ಚಿಟ್ಟಕ್ಕಿ ಸ್ಕೂಲ್ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಮಲೇಬೆನ್ನೂರು : ಕುಂಬಳೂರು ಚಿಟ್ಟಕ್ಕಿ  ಸ್ಕೂಲ್ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಮಲೇಬೆನ್ನೂರು, ಸೆ. 29 – ಹರಿಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಹರಿಹರ ಶಾಲಾ ಶಿಕ್ಷಣ ಇಲಾಖೆ ಇವರ ಆಶ್ರಯದಲ್ಲಿ ಶುಕ್ರವಾರ ಹರಿಹರ ನಗರದಲ್ಲಿ  ಹಮ್ಮಿಕೊಂಡಿದ್ದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಕುಂಬಳೂರು ಗ್ರಾಮದ ಚಿಟ್ಟಕ್ಕಿ ಇಂಟರ್ ನ್ಯಾಷನಲ್ ಸ್ಕೂಲ್ ನ ಬಾಲಕರು ಕಬಡ್ಡಿ ಗುಂಪು ಆಟ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸುವ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿಜೇತ ವಿದ್ಯಾರ್ಥಿಗಳು : ಗಣೇಶ್ ಎಸ್.ವೈ., ಶ್ರೇಯಸ್ ಎಸ್. ಹೆಚ್., ತರುಣ್ ಸಿ.ಆರ್, ವಿನಾಯಕ ಎಸ್. ಕೆ, ಮುರುಳಿ ಕೆ.ಹೆಚ್, ಸಿದ್ದಾರ್ಥ್ ಪಿ. ಯು, ಯಶವಂತ್ ಕೆ, ಧ್ರುವ ಹೆಚ್.ಎಸ್, ಮಹಮ್ಮದ್ ಗೌಸ್ ಖಾನ್, ರಾಕೇಶ್ ಕೆ.ಎನ್., ಮೇಘರಾಜ ಬಿ.ಎಂ ,ಅರ್ಜುನ್ ಬಿ.ಆರ್, ಧನುಷ್ ಕೆ.ವೈ, ಎಂಬ ವಿದ್ಯಾರ್ಥಿಗಳು ಕಬಡ್ಡಿ ಆಟದಲ್ಲಿ ಪ್ರಥಮ ಸ್ಥಾನದೊಂದಿಗೆ ವಿಜೇತರಾಗುವ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 

ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಚಿಟ್ಟಕ್ಕಿ ರಮೇಶ್ , ಆಡಳಿತಾಧಿಕಾರಿ ಎಸ್.ಕೆ. ಕುಮಾರ್, ಪ್ರಾಂಶುಪಾಲ ಚೇತನ್ ಕುಮಾರ್ ಹಂಪಕ್ಕನವರ್ , ಉಪ ಪ್ರಾಂಶುಪಾಲ ಅಖಿಲೇಶ್ವರಿ, ಕ್ರೀಡಾ ವ್ಯವಸ್ಥಾಪಕ ವೀರಭದ್ರಾಚಾರ್, ದೈಹಿಕ ಶಿಕ್ಷಕ ರಾಘವೇಂದ್ರ , ಕ್ರೀಡಾ ಉಸ್ತುವಾರಿ ಮುತ್ತುರಾಜ್ , ತರಬೇತುದಾರರಾದ ವಿಕಾಸ್ ಅವರು ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

error: Content is protected !!