ದಾವಣಗೆರೆ, ಸೆ.29- ರಾಷ್ಟ್ರ ಮಹಾತ್ಮಾಗಾಂಧಿಯವರ ಜನ್ಮ ದಿನಾಚರಣೆ ಅಂಗವಾಗಿ ಕೇಂದ್ರ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನಿರ್ದೇಶನದ ಮೇರೆಗೆ ಸ್ವಚ್ಛತೆಯೇ ಸೇವೆ ಅಭಿಯಾನದ ಭಾಗವಾಗಿ ನಗರದ ಎಂ.ಇ.ಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ವಿವೇಕಾನಂದ ಬಡಾವಣೆಯ ನಾಗರಿಕ ಹಿತರಕ್ಷಣಾ ಸಮಿತಿಯ ಸಹಯೋಗದಲ್ಲಿ ಶನಿವಾರ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯ ನೆರವೇರಿಸಿದರು.
ನಗರದ ಬಿಐಇಟಿ ರಸ್ತೆಯಲ್ಲಿರುವ ಶಿವಧ್ಯಾನ ಮಂದಿರ, ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿನ ದೂಡಾ ಉದ್ಯಾನವನ, ಬನ್ನಿ ಉದ್ಯಾನವನ, ನವಗ್ರಹ ಉದ್ಯಾನವನ ಹಾಗೂ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಆವರಣದ ಉದ್ಯಾನವನಗಳಲ್ಲಿ ಸ್ವಚ್ಛತಾ ಸೇವೆಯನ್ನು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಎಂಇಎಸ್ ಶಿಕ್ಷಣ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಕೆ.ಎಂ., ಆಡಳಿತಾಧಿಕಾರಿ ಸೌಮ್ಯ ಪ್ರದೀಪ್, ಪ್ರಾಚಾರ್ಯ ಡಾ.ವಾಗೀಶ್ ಹಿರೇಮಠ್, ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಮಂಜುನಾಥ್ ಎಂ. ಕುಂಬಾರ್, ಹಿರಿಯ ಪ್ರಾಧ್ಯಾಪಕ ಬಸವರಾಜ್ ಬಿ.ಜಿ, ಸಹ ಪ್ರಾಧ್ಯಾಪಕ ಸುರೇಶ್ ಕೆ.ವಿ.ಪ್ರದೀಪ್ ಕುಮಾರ್ ಜೆ.ಪಿ. ಆಂಜನೇಯ ಕೆ.ಹೆಚ್. ರಂಗನಾಥ್ ಎನ್. ಶಶಿ ಜಿ.ಹೆಚ್, ದೈಹಿಕ ಶಿಕ್ಷಣ ನಿರ್ದೇಶಕ ನಾಗರಾಜ ಎಸ್ ಮತ್ತು ಎಲ್ಲಾ ಪ್ರಶಿಕ್ಷಣಾರ್ಥಿಗಳು ಶ್ರಮದಾನದಲ್ಲಿ ಭಾಗವಹಿಸಿದ್ದರು.