ಹೊನ್ನಾಳಿ, ಸೆ.29- ಪಟ್ಟಣದ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣಕ್ಕೆ `ಕವಿರತ್ನ ಕಾಳಿದಾಸ’ ಎಂದು ಹೆಸರು ಸೂಚಿಸುವಂತೆ ಆಗ್ರಹಿಸಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯು ಪುರಸಭೆ ಅಧ್ಯಕ್ಷ ಮೈಲಪ್ಪ ಅವರಿಗೆ ಮನವಿ ಸಲ್ಲಿಸಿತು. ಈ ವೇಳೆ ವೇದಿಕೆಯ ತಾಲ್ಲೂಕು ಅಧ್ಯಕ್ಷ ಪ್ರದೀಪ್ ಮಾರಗುಂಡನಹಳ್ಳಿ, ಉಪಾಧ್ಯಕ್ಷೆ ಸಾವಿತ್ರಮ್ಮ ವಿಜೇಂದ್ರಪ್ಪ, ಮುಖ್ಯ ಅಧಿಕಾರಿ ಲೀಲಾವತಿ ಮತ್ತು ಪುರಸಭಾ ಸದಸ್ಯರು ಇದ್ದರು.
ಬಸ್ ನಿಲ್ದಾಣಕ್ಕೆ `ಕವಿರತ್ನ ಕಾಳಿದಾಸ’ ಹೆಸರಿಡಲು ಆಗ್ರಹ
