ದಾವಣಗೆರೆ, ಸೆ. 11 – ಹುಂಡೈ ಮೋಟಾರ್ ಇಂಡಿಯಾ ಕಂಪನಿಯ ಅಲ್ಕಜಾರ್ನ ಹೊಸ ಮಾದರಿಯ ಕಾರನ್ನು ನಗರದ ಕೆ.ಜೆ. ಹುಂಡೈ ಶೋ ರೂಂ ನಲ್ಲಿ ಕೆ.ಜೆ. ಹುಂಡೈ ಸಂಸ್ಥೆಯ ಅಧ್ಯಕ್ಷ ಕೆ. ಜಾವೀದ್ ಸಾಬ್ ಅವರು ಮಾರುಕಟ್ಟೆಗೆ ಪರಿಚಯಿಸಿದರು.
ಸಮಾರಂಭದಲ್ಲಿ ಮಾತನಾಡಿದ ಕೆ.ಜೆ. ಹುಂಡೈ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಜೆ. ಅಫಕ್ ರಜ್ವಿ ಹುಂಡೈ ಬ್ರ್ಯಾಂಡ್ನ ಯಶಸ್ಸು ಮತ್ತು ಪರಂಪರೆಯ ಮೇಲೆ ಹೊಸ ವಾಹನವನ್ನು ಉತ್ಪಾದಿಸಲಾಗಿದೆ ಎಂದು ತಿಳಿಸಿದರು.
1.5 ಲೀ. ಸಾಮರ್ಥ್ಯದ ಟರ್ಬೊ ಜಿಡಿಐ ಪೆಟ್ರೋಲ್ ವಾಹನದ ಆರಂಭಿಕ ಬೆಲೆ 14.99 ಲಕ್ಷ ಇದೆ. 1.5 ಲೀ. ಸಾಮರ್ಥ್ಯದ ಯು2 ಸಿಆರ್ಡಿಐ ಡೀಸೆಲ್ ವಾಹನದ ಆರಂಭಿಕ ಬೆಲೆ 15.99 ಲಕ್ಷ ಇದೆ ಎಂದು ತಿಳಿಸಿದರು.
ಆರು ಹಾಗೂ ಏಳು ಆಸನಗಳ ಸಾಮರ್ಥ್ಯದಲ್ಲಿ ಈ ವಾಹನ ಲಭ್ಯವಿರಲಿದೆ. ಕ್ಯಾಬಿನ್ ಹೈಟೆಕ್ ಮತ್ತು ಆರಾಮದಾಯಕ ಅನುಭವವನ್ನು ನೀಡಲಿದೆ. ಈ ವಾಹನದಲ್ಲಿ 8 ಸ್ಪೀಕರ್ ವ್ಯವಸ್ಥೆ, ಮಳೆಯ ಸೆನ್ಸಿಂಗ್ ವೈಪರ್ಗಳು, ಪಾರ್ಕಿಂಗ್ ಸೆನ್ಸಾರ್, ಎಲ್ಇಡಿ ಹೆಡ್ಲ್ಯಾಂಪ್ಗಳು ಆರು ಏರ್ ಬ್ಯಾಗ್ಗಳು, 4 ಡಿಸ್ಕ್ ಬ್ರೇಕ್ಗಳು, 40 ಪ್ರಮಾಣಿತ ಮತ್ತು 70ಕ್ಕೂ ಹೆಚ್ಚು ಸುರಕ್ಷತಾ ವೈಶಿಷ್ಟ್ಯಗಳು ಇರಲಿವೆ. 9 ಆಕರ್ಷಕ ಬಣ್ಣಗಳಲ್ಲಿ ದೊರೆಯಲಿದ್ದು, 8 ಮೊನೊ-ಟೋನ್ ಆಯ್ಕೆ ಹೊಂದಿರಲಿದೆ ಎಂದು ಕಂಪನಿ ತಿಳಿಸಿದೆ.
ಸಂಸ್ಥೆಯ ನಿರ್ದೇಶಕ ಕೆ.ಜೆ.ಅಬ್ರಾಹರ್, ಹುಂಡೈ ಕಂಪನಿಯ ಎ.ಪಿ.ಎಸ್.ಎಂ. ಅರುಣ್, ಹುಂಡೈ ಇಂಡಿಯಾ ಇನ್ಸೂರೆನ್ಸ್ ಕಂಪನಿಯ ಅಮಿತ್, ಹುಂಡೈ ಇಂಡಿಯಾ ಇನ್ಸೂರೆನ್ಸ್ ಕಂಪನಿಯ ಕಾರ್ತಿಕ್, ಸೆಲ್ಸ್ ಮ್ಯಾನೇಜರ್ ಹಂಜಲ್ ಹಾಗೂ ಇತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.