ಮಲೇಬೆನ್ನೂರು, ಸೆ. 11- ಕೊಮಾರನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಶ್ರೀಮತಿ ಶಿಲ್ಪಾ ಮತ್ತು ಶ್ರೀಮತಿ ಲಕ್ಷ್ಮೀಬಾಯಿ ಇವರ ಮನೆಗಳಿಗೆ ಹಾನಿಯಾಗಿತ್ತು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಡಾ. ವೀರೇಂದ್ರ ಹೆಗ್ಗಡೆ ಅವರು ಮಂಜೂರು ಮಾಡಿದ 25 ಸಾವಿರ ರೂ.ಗಳ ಚೆಕ್ಕನ್ನು ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಜಿ. ಮಂಜುನಾಥ್ ಪಟೇಲ್, ಜಿಗಳಿ ಪ್ರಕಾಶ್ ಮತ್ತು ಧರ್ಮಸ್ಥಳ ಯೋಜನೆಯ ಮಲೇಬೆನ್ನೂರು ಯೋಜನಾಧಿಕಾರಿ ವಸಂತ್ ದೇವಾಡಿಗ, ಗ್ರಾ.ಪಂ. ಸದಸ್ಯ ಮಡಿವಾಳರ್ ಬಸವರಾಜ್ ಅವರು ಶಿಲ್ಪಾ ಮತ್ತು ಲಕ್ಷ್ಮೀ ಬಾಯಿ ಅವರಿಗೆ ವಿತರಿಸಿದರು.
ಗ್ರಾಮದ ಎಸ್.ಡಿ. ರಂಗನಾಥ್, ಹೋಟೆಲ್ ಪರಮೇಶ್ವರಪ್ಪ, ಕೆ. ಪರಮೇಶ್ವರಪ್ಪ, ಪಾರೇರ ರಂಗಪ್ಪ, ಮಲ್ಲನಾಯ್ಕನಹಳ್ಳಿ ವಲಯ ಮೇಲ್ವಿಚಾರಕಿ ರಕ್ಷಿತಾ, ಸೇವಾ ಪ್ರತಿನಿಧಿ ಶಿಲ್ಪಾ ಮತ್ತು ಅನುಷಾ ಈ ವೇಳೆ ಹಾಜರಿದ್ದರು.