ದಾವಣಗೆರೆ, ಸೆ. 3- ಭಾರತ ವಿಕಾಸ್ ಪರಿಷತ್ ಗೌತಮ ಶಾಖೆಯ ಕಾರ್ಯಕಾರಿ ಸದಸ್ಯರು ಹಾಗೂ ಇತರೆ ಸದಸ್ಯರು ಭದ್ರೆಗೆ ಹಾಗೂ ಕೂಡಲಿಯ ತುಂಗಾ-ಭದ್ರಾ ಸಂಗಮದಲ್ಲಿ ಬಾಗಿನ ಸಮರ್ಪಣಾ ಕಾರ್ಯಕ್ರಮ ನಡೆಸಲಾಯಿತು. ಈ ಸಂದರ್ಭದಲ್ಲಿ ಭಾರತ ವಿಕಾಸ ಪರಿಷತ್ ಅಧ್ಯಕ್ಷ ಅಜ್ಜಂಪುರ ವಿಜಯಕುಮಾರ್, ವಿಕಾಸ ಪರಿಷತ್ ಪ್ರಾಂತೀಯ ಕಾರ್ಯದರ್ಶಿ ಟಿ.ಎಸ್. ಜಯರುದ್ರೇಶ್, ಶ್ರೀಮತಿ ಸುಧಾ ಜಯರುದ್ರೇಶ್, ಕಾರ್ಯದರ್ಶಿ ಮಧುಕರ್, ಡಾ. ಆರತಿ ಸುಂದರೇಶ್, ಶಾಂತಾ ತಿಪ್ಪಣ್ಣ, ನಯನ ಲೋಕೇಶ್, ಡಾ. ಶಶಿಕಲಾ ಎಸ್.ಟಿ. ವಿಜಯೇಂದ್ರ ಮತ್ತಿತರರು ಉಪಸ್ಥಿತರಿದ್ದರು.
September 14, 2024