ಜಿಲ್ಲಾ ಬಿಜೆಪಿ ವತಿಯಿಂದ ಸದಸ್ಯತ್ವ ಅಭಿಯಾನ

ಜಿಲ್ಲಾ ಬಿಜೆಪಿ ವತಿಯಿಂದ ಸದಸ್ಯತ್ವ ಅಭಿಯಾನ

ದಾವಣಗೆರೆ, ಸೆ.3-‌ ಜಿಲ್ಲಾ ಬಿಜೆಪಿ ವತಿಯಿಂದ ನಗರದ ಬಿಜೆಪಿ ಕಚೇರಿಯಲ್ಲಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮವು ಇಂದು ನಡೆಯಿತು.

ಲೋಕಸಭಾ ಕ್ಷೇತ್ರದ ಬಿಜೆಪಿ ಮುಖಂಡರಾದ ಶ್ರೀಮತಿ ಗಾಯತ್ರಿ ಸಿದ್ದೇಶ್ವರ ಸಭೆಯಲ್ಲಿ ಭಾಗವಹಿಸಿ, ಸದಸ್ಯತ್ವ ಅಭಿಯಾನದಲ್ಲಿ ಸದಸ್ಯರಾಗಿ ಬಲಿಷ್ಠ ಭಾರತ ರೂಪಿಸುವಲ್ಲಿ ಶ್ರಮಿಸೋಣ ಎಂದು ಹೇಳಿದರು.

ಮುಖಂಡರುಗಳಾದ ಯಶವಂತ ರಾವ್ ಜಾಧವ್, ಶ್ರೀನಿವಾಸ ದಾಸಕರಿಯಪ್ಪ, ಕೊಳೇನಹಳ್ಳಿ ಸತೀಶ್, ಜಯಮ್ಮ, ರಮೇಶ ನಾಯ್ಕ, ಗುರುಪ್ರಸಾದ್, ವಿಜಯ ಕುಮಾರ, ನಜೀರ್ ಅಹಮ್ಮದ್, ಕಿಶೋರ್ ಮತ್ತು ಇತರರು ಸಭೆಯಲ್ಲಿ ಹಾಜರಿದ್ದರು.

error: Content is protected !!