ಸಂಕಲ್ಪ ಫೌಂಡೇಷನ್ನಿನಿಂದ ನೇತ್ರ ತಪಾಸಣೆ

ಸಂಕಲ್ಪ ಫೌಂಡೇಷನ್ನಿನಿಂದ ನೇತ್ರ ತಪಾಸಣೆ

ದಾವಣಗೆರೆ, ಸೆ.3- ಸಂಕಲ್ಪ ಸೇವಾ ಫೌಂಡೇಷನ್, ನೇತ್ರಾಲಯ ಹಾಗೂ  ಕರ್ನಾಟಕ ರಾಜ್ಯ ಸರ್ವ ಜನಾಂಗ ಏಕತಾ ರಕ್ಷಣಾ ಸಮಿತಿ ಇವರ ಸಹಯೋಗದೊಂದಿಗೆ ಎಸ್. ನಿಜಲಿಂಗಪ್ಪ ಬಡಾವಣೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಲಾಗಿದ್ದ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಪಾಲಿಕೆ ಸದಸ್ಯ ಎ. ನಾಗರಾಜ್ ಉದ್ಘಾಟಿಸಿದರು.

ಸಂಕಲ್ಪ ಸೇವಾ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಜಿ. ಮಹಾಂತೇಶ್, ಕರ್ನಾಟಕ ರಾಜ್ಯ ಸರ್ವ ಜನಾಂಗ ಏಕತಾ ರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ
ಕಣ್ಣಾಳ ಅಂಜಿನಪ್ಪ ಶಾಮನೂರು, ಅಯ್ಯಪ್ಪಸ್ವಾಮಿ ದೇವಸ್ಥಾನ ಅಧ್ಯಕ್ಷ ಸತ್ಯನಾರಾಯಣರಾವ್, ರಾಜ್ಯ ಸರ್ವ ಜನಾಂಗ ಏಕತಾ ರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಎಂ. ಹನುಮಂತ್, ಸದಸ್ಯರಾದ ಬಿ. ಶಂಕರ್, ಎಸ್. ರಾಜು, ಹೆಚ್. ಯೂಸೂಫ್, ಪರಮೇಶ್, ಗಿರೀಶ್ ಹೆಗಡೆ, ಸಮೀರ್, ವಿನೋದ್, ವಿದ್ಯಾನಂದ, ಪರಶುರಾಮ್, ರಾಮಣ್ಣ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

error: Content is protected !!