ಹರಿಹರ, ಅ. 12 – ನಗರದ ತಾ.ಪಂ. ಇಲಾಖೆಯ ಇಓ ಆಗಿ ಸುಮಲತಾ ಎಸ್.ಪಿ. ಚಂದ್ರಶೇಖರ್ ಅವರು ಇಂದು ಪ್ರಭಾರಿ ಇಓ ರಾಮ ಕೃಷ್ಣಪ್ಪ ನವರಿಂದ ಅಧಿಕಾರ ಸ್ವೀಕರಿಸಿದರು.
ಈ ವೇಳೆ ಸುಮಲತಾ ಮಾತನಾಡಿ, ತಾವು ಈ ಹಿಂದೆ ದಾವಣಗೆರೆ ಜಿ.ಪಂ. ಎಪಿಓ ಆಗಿದ್ದೆ. ಅಲ್ಲಿಂದ ರಾಣೆಬೇನ್ನೂರು ತಾ.ಪಂ. ಇಲಾಖೆಯ ಇಓ ಆಗಿ ಕೆಲಸ ಮಾಡಿ ಈಗ ಹರಿಹರ ತಾಲ್ಲೂಕಿನ ಇಓ ಆಗಿ ಅಧಿಕಾರ ಸ್ವೀಕರಿಸಿದ್ದೇನೆ. ರಾಣೆಬೇನ್ನೂರು ತಾ.ಪಂ. ಇಲಾಖೆಯಲ್ಲಿ 40 ಗ್ರಾ.ಪಂ.ಗಳು ಬರುತ್ತವೆ. ಅಲ್ಲಿ ಕರ್ತವ್ಯ ನಿರ್ವಹಣೆಯ ಮಾಡಿದ ಅನುಭವ ಇರುವುದರಿಂದ ಹರಿಹರ ತಾಲ್ಲೂಕಿನ 23 ಗ್ರಾಮ ಪಂಚಾಯತಿಗಳನ್ನು ನಿಭಾಯಿಸುವುದು ಅಷ್ಟೊಂದು ಕಷ್ಡವಾಗದು. ನಾನೂ ಕೂಡ ಇದೇ ತಾಲ್ಲೂಕಿನ ಗುಡ್ಡದ ಬೇವಿನಹಳ್ಳಿ ಗ್ರಾಮದವನು ಆಗಿರೋದರಿಂದ, ಸ್ವಂತ ತಾಲ್ಲೂಕಿನ ಜನರ ಕಷ್ಟಗಳನ್ನು ನಿರ್ವಹಣೆ ಮಾಡುವಂತಹ ಸೌಭಾಗ್ಯ ಸಿಕ್ಕಿರುವುದರಿಂದ ತಾಲ್ಲೂಕಿನ ಪ್ರತಿಯೊಂದು ಗ್ರಾಮ ಪಂಚಾಯತಿಗಳನ್ನು ಪ್ರಗತಿಯ ಕಡೆಗೆ ತೆಗೆದುಕೊಂಡು ಹೋಗಬೇಕು ಎಂಬ ಆಶಯವನ್ನು ಹೊಂದಿರುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಪ್ರಭಾರಿ ತಾ.ಪಂ. ಇಓ ರಾಮಕೃಷ್ಣಪ್ಪ, ಲೆಕ್ಕಾಧಿಕಾರಿ ಲಿಂಗರಾಜ್, ಸುನೀಲ್, ಕಿರಣ್ ಕುಮಾರ್, ಸಲೀಂ, ಮಂಜುನಾಥ್, ಆರ್.ಜಿ ಪೂಜಾ, ವಿನಾಯಕ, ಅರುಣ್ ವೀರೇಂದ್ರ ಪಾಟೀಲ್ ಇತರರು ಹಾಜರಿದ್ದರು.