ಹಿರಿಯ ಬಸವ ತತ್ವ ಪಾಲಕ ಶತಾಯುಷಿ ಸಿದ್ರಾಮಣ್ಣ ಇನ್ನಿಲ್ಲ

ಹಿರಿಯ ಬಸವ ತತ್ವ ಪಾಲಕ ಶತಾಯುಷಿ ಸಿದ್ರಾಮಣ್ಣ ಇನ್ನಿಲ್ಲ

ದಾವಣಗೆರೆ, ಆ.12 – ಹಿರಿಯ ಬಸವ ತತ್ವ ಪಾಲಕರೂ, ಅನುಭವ ಮಂಟಪದ ಮಾಜಿ ಸಂಚಾಲಕರೂ ಆದ ಶತಾಯುಷಿ ವಿ. ಸಿದ್ದರಾಮಣ್ಣ ಅವರು ಇಂದು ಮಧ್ಯಾಹ್ನ 2 ಗಂಟೆಗೆ ನಿಧನರಾದರು. 

ಮೃತರಿಗೆ ಸುಮಾರು 104 ವರ್ಷ ವಯಸ್ಸಾಗಿತ್ತು. ಕೆಲ ದಿನಗಳಿಂದ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು,  ಎಸ್.ಎಸ್. ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಮೂಲತಃ ಹರಪನಹಳ್ಳಿ ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮದವರಾದ ಸಿದ್ದರಾಮಣ್ಣ, ಮೂವರು ಪುತ್ರರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಮೃತರ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಸ್ಥಳೀಯ ಸರಸ್ವತಿ ನಗರದಲ್ಲಿರುವ ಬಸವ ಬಳಗದಲ್ಲಿ ನಾಳೆ ದಿನಾಂಕ 13ರ ಮಂಗಳವಾರ ಬೆಳಿಗ್ಗೆ 9 ರವರೆಗೆ ಇಡಲಾಗುವುದು. ನಂತರ ಮಧ್ಯಾಹ್ನ 1.30ಕ್ಕೆ ಹರಪನಹಳ್ಳಿ ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮದಲ್ಲಿರುವ ಅವರ ಸ್ವಂತ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಬಸವ ಬಳಗದ ಅಗಡಿ ಮಹಾಂತೇಶ್ ತಿಳಿಸಿದ್ದಾರೆ.

ಹತ್ತು ವರ್ಷಗಳ ಕಾಲ ಬೀದರ್ ಜಿಲ್ಲೆಯ ಬಸವ ಕಲ್ಯಾಣದ ಅನುಭವ ಮಂಟಪದ ಸಂಚಾಲಕರಾಗಿ ಸೇವೆ ಸಲ್ಲಿಸಿದ್ದ ಸಿದ್ದರಾಮಣ್ಣ, ನಂತರ  ದಾವಣಗೆರೆ ಬಸವ ಬಳಗದಲ್ಲಿದ್ದರು. ರಾಜ್ಯ ಮಾತ್ರವಲ್ಲದೇ, ದೇಶದ ವಿವಿಧ ಭಾಗಗಳಲ್ಲಿ ಬಸವ ತತ್ವ ಕುರಿತು ಪ್ರವಚನ ನೀಡುತ್ತಿದ್ದರು.  ಕಲ್ಯಾಣ ಕ್ರಾಂತಿ, ಶರಣರ ಕುರಿತು ಹತ್ತಾರು ಗ್ರಂಥಗಳನ್ನು ರಚಿಸಿದ್ದರು.

error: Content is protected !!