ಭಾನುವಳ್ಳಿಗೆ ತಲುಪದ ಭದ್ರಾ ನೀರು ಒಣಗಲು ಆರಂಭಿಸಿದ ಮೆಕ್ಕೆಜೋಳ

ಭಾನುವಳ್ಳಿಗೆ ತಲುಪದ ಭದ್ರಾ ನೀರು  ಒಣಗಲು ಆರಂಭಿಸಿದ ಮೆಕ್ಕೆಜೋಳ

ಮಲೇಬೆನ್ನೂರು, ಆ. 12 – ಭಾನುವಳ್ಳಿ ಗ್ರಾಮದ ಜಮೀನುಗಳಲ್ಲಿ ಬೆಳೆದಿರುವ ನೂರಾರು ಎಕರೆ ಮೆಕ್ಕೆಜೋಳದ ಬೆಳೆ ಮಳೆ ಇಲ್ಲದೆ ಮತ್ತು ಕಾಲುವೆಯಲ್ಲಿ ನೀರು ಬಾರದ ಕಾರಣ ಒಣಗಲು ಆರಂಭಿಸಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಭದ್ರಾ ಕಾಲುವೆಗಳಲ್ಲಿ ಹೂಳು ತುಂಬಿಕೊಂಡಿರುವುದರಿಂದ ಕಾಲುವೆ ನೀರು ಈ ಕ್ಷಣದವರೆಗೂ ನಮ್ಮ ಭಾಗಕ್ಕೆ ಬಂದಿಲ್ಲ ಎಂದು ಗ್ರಾಮದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮಳೆ ಆಶ್ರಿತ ಜಮೀನುಗಳಲ್ಲಿ ಬೆಳೆದಿರುವ ಮೆಕ್ಕೆಜೋಳವೂ ಮಳೆ ಇಲ್ಲದೆ ಬತ್ತಲು ಆರಂಭಿಸಿದೆ.  

error: Content is protected !!