ಬಾಂಗ್ಲಾ ದೇಶದ ಹಿಂದೂಗಳ ರಕ್ಷಣೆಗೆ ಆಗ್ರಹ

ಬಾಂಗ್ಲಾ ದೇಶದ ಹಿಂದೂಗಳ ರಕ್ಷಣೆಗೆ ಆಗ್ರಹ

ಹರಿಹರದಲ್ಲಿ ಹಿಂದೂ ಹಿತರಕ್ಷಣಾ ಸಮಿತಿ ಮತ್ತು ಬಿಜೆಪಿ ಪ್ರತಿಭಟನೆ

ಹರಿಹರ, ಅ.12- ಬಾಂಗ್ಲಾ  ಹಿಂದೂಗಳ ಸುರಕ್ಷತೆಗೆ ಸರ್ಕಾರ  ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿ ಹಿಂದೂ ಹಿತರಕ್ಷಣಾ ಸಮಿತಿ ಮತ್ತು  ತಾಲ್ಲೂಕು ಬಿಜೆಪಿ  ವತಿಯಿಂದ ನಗರದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಲಾಯಿತು.

ಪಕ್ಕೀರಸ್ವಾಮಿ ಮಠದ ಮುಂಭಾಗದಿಂದ ಆರಂಭ ಗೊಂಡ    ಪ್ರತಿಭಟನಾ ಮೆರವಣಿಗೆ ರಾಣಿ ಚೆನ್ನಮ್ಮ ವೃತ್ತ, ಮುಖ್ಯ ರಸ್ತೆ, ಗಾಂಧಿ ವೃತ್ತದ ಮೂಲಕ ಸಂಚರಿಸಿ ತಹಶೀಲ್ದಾರ್ ಕಚೇರಿಗೆ ತೆರಳಿದ ಪ್ರತಿಭಟನಾಕಾರರು ತಹಶೀಲ್ದಾರ್ ಪುಷ್ಪಾವತಿ  ಅವರಿಗೆ ಮನವಿ ಸಲ್ಲಿಸಿದರು.

ಬಿಜೆಪಿ ಮುಖಂಡ ಹನಗವಾಡಿ ಎಸ್.ಎಂ.ವೀರೇಶ್, ರಾಜನಹಳ್ಳಿ ಶಿವಕುಮಾರ್, ಚಂದ್ರಶೇಖರ್ ಪೂಜಾರ್ ಮಾತನಾಡಿ, ನೆರೆಯ ಬಾಂಗ್ಲಾದೇಶ ತೀವ್ರ ಹಿಂಸಾಚಾರದಿಂದ ಬಳಲು ತ್ತಿದ್ದು, ಚುನಾಯಿತ ಪ್ರಧಾನಿ ರಾಜೀನಾಮೆ ನೀಡಿ ದೇಶವನ್ನು ತೊರೆದ ನಂತರ ಅಲ್ಲಿಯ ಕಾನೂನು ಸುವ್ಯವಸ್ಥೆ ಸಂಪೂರ್ಣ ನಿಷ್ಕ್ರಿಯವಾಗಿದೆ.   ಈ ಗೊಂದಲಮಯ ಪರಿಸ್ಥಿತಿಯಲ್ಲಿ ಅಲ್ಲಿನ ತೀವ್ರಗಾಮಿ ಜಿಹಾದಿ ಶಕ್ತಿಗಳು ಹಿಂದೂ ಸಮುದಾಯದ ಜನರ ಮೇಲೆ ಮತ್ತು ಅವರುಗಳ ಮನೆಯ ಮೇಲೆ ದೊಡ್ಡ ಪ್ರಮಾಣದಲ್ಲಿ ದಾಳಿ ಯನ್ನು ಪ್ರಾರಂಭಿಸಿ ಹಿಂಸೆಯನ್ನು ನೀಡುತ್ತಿದ್ದಾರೆ. 

ಹಿಂದೂ ಧಾರ್ಮಿಕ ಸ್ಥಳಗಳು, ವ್ಯಾಪಾರಿ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ. ವಿಭಜನೆಯ ಸಮಯದಲ್ಲಿ ಬಾಂಗ್ಲಾದೇಶದಲ್ಲಿ ಶೇ. 32 ರಷ್ಟು ಇದ್ದ ಹಿಂದೂಗಳ ಜನಸಂಖ್ಯೆ ಈಗ ಶೇ. 8ಕ್ಕಿಂತಲೂ ಕಡಿಮೆಯಾಗಿದೆ. ಬಾಂಗ್ಲಾದೇಶದ ಹಿಂದೂಗಳ ಸುರಕ್ಷತೆಗಾಗಿ ಮತ್ತು ಮಾನವ ಹಕ್ಕುಗಳನ್ನು ರಕ್ಷಿಸಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವುದು ವಿಶ್ವ ಸಮುದಾಯದ ಜವಾಬ್ದಾರಿ ಆಗಿದೆ  ಎಂದು  ಹೇಳಿದರು.

ಈಗಾಗಲೇ ಅಸ್ತಿತ್ವಕ್ಕೆ ಬಂದಿರುವ ಹೊಸ ಸರ್ಕಾರ ಅಲ್ಲಿನ ಹಿಂದೂಗಳಿಗೆ ರಕ್ಷಣೆ ಕೊಡ ಬೇಕು ಹಾಗೂ ದಾಳಿಯಿಂದ ನಾಶಗೊಂಡಿರುವ ಹಿಂದೂಗಳ ಮನೆಗಳನ್ನು ಪುನರ್ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಅಜಿತ್ ಸಾವಂತ್, ಡಾ. ಖಮಿತ್ಕರ್,  ನಿವೃತ್ತ ಶಿಕ್ಷಕ ಕೃಷ್ಣಮೂರ್ತಿ ಶೆಟ್ಟಿ, ಬಾತಿ ಚಂದ್ರಶೇಖರ್, ತುಳಜಪ್ಪ ಭೂತೆ, ಹೆಚ್‌. ದಿನೇಶ್, ಹೆಚ್.ಎಸ್. ರಾಘವೇಂದ್ರ, ರಾಜು ರೋಖಡೆ, ಪರಶುರಾಮ್ ಕಾಟ್ವೆ, ಹೆಚ್‌. ಮಂಜಾನಾಯ್ಕ್, ಗಿರೀಶ್ ಗೌಡ, ವಾಸು ಚಂದಪೂರ್, ಬೆಣ್ಣೆ ಸಿದ್ದೇಶ್, ಚಂದ್ರಕಾಂತ್ ಗೌಡ, ಹರೀಶ್ ಶಿವಪ್ರಸಾದ್, ಸ್ವಾತಿ ಹನುಮಂತಪ್ಪ, ಸುನಿಲ್, ಸಂತೋಷ್‌ ಗುಡಿಮನಿ, ಕಿರಣ್, ರವಿ ತಾವರಗಿ, ಮಹಾಂತೇಶ್, ಪ್ರಶಾಂತ್, ಪ್ರಮೀಳಾ ನಲ್ಲೂರು, ರೂಪಾ ಕಾಟ್ವೆ, ಅಂಬುಜಾ ರಾಜೊಳ್ಳಿ, ರಶ್ಮಿ ಮೆಹರ್ವಾಡೆ, ಸಂತೋಷಿ ಮೋಹಿತೆ, ಸಾಕ್ಷಿ, ಆಶಾ ಕುಂಟೆ, ರೂಪಾ, ಇತರರು ಹಾಜರಿದ್ದರು.

error: Content is protected !!