ದಾವಣಗೆರೆ, ಆ. 11 – ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಆನಗೋಡಿನಲ್ಲಿರುವ ಇಂದಿರಾ ಪ್ರಿಯದರ್ಶಿನಿ ಪಾರ್ಕ್ ಪಕ್ಕದಲ್ಲಿರುವ ರೈತ ಹುತಾತ್ಮರ ಭವನಕ್ಕೆ ಇಂದು ಭೇಟಿ ನೀಡಿ, ದಿ|| ಓಬೇನಹಳ್ಳಿ ಕಲಿಂಗಪ್ಪ, ದಿ|| ಸಿದ್ದನೂರು ನಾಗರಾಜಚಾರ್ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಎನ್.ಜಿ. ಪುಟ್ಟಸ್ವಾಮಿ, ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.
September 14, 2024