ಹರಪನಹಳ್ಳಿ, ಜು.31- ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆ ಕಂಚಿಕೆರೆ ವಲಯದಿಂದ ತಾ.ನ ಸಿಂಗ್ರಿಹಳ್ಳಿ ಗ್ರಾಮದ ನಿವಾಸಿ ಭರಮವ್ವ ಕೆಂಚಪ್ಪ ಎಂಬ ಕುಟುಂಬದ ಕಷ್ಟದ ಸ್ಥಿತಿ ಗಮನಿಸಿ ಅಗತ್ಯ ವಸ್ತುಗಳಾದ ಬಟ್ಟೆ, ಚಾಪೆ, ದಿಂಬು, ಬೆಡ್ ಶೀಟ್, ಪಾತ್ರೆ, ಆಹಾರ ಧಾನ್ಯ ಹಾಗೂ ಮಾಸಿಕ ಸಾವಿರ ರೂ.ಗಳನ್ನು ಯೋಜನಾಧಿಕಾರಿ ಸುಬ್ರಮಣ್ಯ ವಿತರಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷ ಪಲ್ಲವಿ, ಮೇಲ್ವಿಚಾರಕಿ ದ್ಯಾಮಕ್ಕ, ಕವಿತಾ, ಶ್ವೇತಾ, ಸಂಘದ ಸದಸ್ಯರು ಹಾಗೂ ಊರಿನ ಗ್ರಾಮಸ್ಥರು ಇದ್ದರು.