ಸಂತ ಶ್ರೇಷ್ಠ ಶಿರೋಮಣಿ ಶ್ರೀ ನಾಮದೇವ ಮಹಾರಾಜರ 674ನೇ ಸಂಜೀವಿನಿ ಸೋಹಳಾ (ಪುಣ್ಯಾರಾಧನೆ) ಕಾರ್ಯಕ್ರಮವು ಇಂದು ಮತ್ತು ನಾಳೆ ದೊಡ್ಡಪೇಟೆಯಲ್ಲಿರುವ ಶ್ರೀ ವಿಠಲ ಮಂದಿರದಲ್ಲಿ ನಡೆಯಲಿದೆ.
ನಾಮದೇವ ಸಿಂಪಿ ಸಮಾಜದಿಂದ ಈ ಕಾರ್ಯಕ್ರಮ ಏರ್ಪಾಡಾಗಿದ್ದು, ಇಂದು ಸಂಜೆ 5 ಗಂಟೆಗೆ ಪೋತಿ ಸ್ಥಾಪನೆ, ಭಜನೆ, ಸಂಜೆ 7 ಗಂಟೆಗೆ ಹ.ಭ.ಪ. ಜೆ.ಪಿ. ಪುಂಡಲೀಕರಾವ್ ಜ್ಞಾನಮೋಟೆ (ಹೊಸಪೇಟೆ) ಅವರಿಂದ ಕೀರ್ತನೆ ಜರುಗಲಿದೆ.
ನಾಳೆ ಶುಕ್ರವಾರ ಮುಂಜಾನೆ 5 ರಿಂದ 7ರವರೆಗೆ ಭಜನೆ, ಕಾಕಡಾರತಿ, ಬೆಳಿಗ್ಗೆ 7 ಗಂಟೆಗೆ ಹ.ಭ.ಪ. ಮಂಜುನಾಥ ಪಿಸೆ ಸಂಗಡಿಗರಿಂದ ಹರಿಪಾಠ, ಬೆಳಿಗ್ಗೆ 8.30ರಿಂದ ಪ್ರವಚನ, ಬೆಳಿಗ್ಗೆ 10 ರಿಂದ ಪಲ್ಲಕ್ಕಿ ಉತ್ಸವ ಮತ್ತು ಗುಲಾಲ್ ಕಾರ್ಯಕ್ರಮ, ಮಧ್ಯಾಹ್ನ 12 ಕ್ಕೆ ಕೀರ್ತನೆ ಮಧ್ಯಾಹ್ನ 1.30ಕ್ಕೆ ಮಹಾಮಂಗಳಾರತಿ ಕಾರ್ಯಕ್ರಮಗಳು ಆಯೋಜನೆಗೊಂಡಿವೆ.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಮಾಜ ಬಾಂಧವರು, ಸದ್ಭಕ್ತರು ಭಾಗವಹಿಸುವಂತೆ ಅಧ್ಯಕ್ಷ ಎಂ.ಎಸ್. ವಿಠಲ್, ಗೌರವಾಧ್ಯಕ್ಷ ಜ್ಞಾನದೇವ ಬೊಂಗಾಳೆ ಅವರುಗಳು ಕೋರಿದ್ದಾರೆ.