ಪ್ರವೀಣ್ ಕಮ್ಮಾರ್‌ಗೆ ಪಿಹೆಚ್‌ಡಿ

ಪ್ರವೀಣ್ ಕಮ್ಮಾರ್‌ಗೆ ಪಿಹೆಚ್‌ಡಿ

ದಾವಣಗೆರೆ, ಜು. 25 – ನಗರದ ಮಹಿಳಾ ಸೇವಾ ಸಮಾಜ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ಎ.ವಿ. ಕಮಲಮ್ಮ ಕಾಲೇಜಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕ ಪ್ರವೀಣ್ ಕಮ್ಮಾರ ಅವರು ತಮಿಳುನಾಡಿನ ಅಣ್ಣಾಮಲೈ ಯೂನಿವರ್ಸಿಟಿಯಿಂದ ಪಿಹೆಚ್‌ಡಿ ಪದವಿ ಪಡೆದಿದ್ದಾರೆ.

ಅಣ್ಣಾಮಲೈ ಯೂನಿವರ್ಸಿಟಿಯ ಡಾ. ಕೆ. ರಾಮು ಅವರ ಮಾರ್ಗದರ್ಶನದಲ್ಲಿ `ಎಕಾನಾಮಿಕ್ ಅನಾಲಿಸಿಸ್ ಆಫ್ ಆಕ್ಯುಪೇಷನಲ್ ಹೆಲ್ತ್ ಹಜಾರ್ಡ್ಸ್ ಆಪ್ ಅಗ್ರಿಕಲ್ಚರ್ ಲೇಬರ್ ಇನ್ ದಾವಣಗೆರೆ ಡಿಸ್ಟಿಕ್ಟ್ ಕರ್ನಾಟಕ’ ವಿಷಯ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಪ್ರವೀಣ್ ಅವರಿಗೆ ಪಿಹೆಚ್‌ಡಿ ಪದವಿ ಲಭಿಸಿದೆ.

ಪ್ರವೀಣ್ ಕಮ್ಮಾರ, ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಇನಾಂ ಲಕ್ಮಾಪುರ ಗ್ರಾಮದ ನಿಂಗಪ್ಪ,  ಗಂಗಮ್ಮ ದಂಪತಿ ಪುತ್ರ.

error: Content is protected !!