ದಾವಣಗೆರೆ, ಜು.18- ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಸುವರ್ಣ ಕರ್ನಾಟಕ ಕಾರ್ಮಿಕರ ವೇದಿಕೆಯ ಸಂಯುಕ್ತಾಶ್ರಯದಲ್ಲಿ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮ ಅವಧೂತ ದತ್ತಪೀಠದಲ್ಲಿ ಕಳೆದ ವಾರ ನಡೆದ `ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್’ ಹಾಗೂ `ರಾಜ್ಯ ವಿಭೂಷಣ ಪ್ರಶಸ್ತಿ’ ಪ್ರದಾನ ಸಮಾರಂಭ ನಡೆಯಿತು. ಈ ವೇಳೆ ಅನೇಕ ಸಾಧಕರ ಪೈಕಿ ನಗರದ ಅಂತರರಾಷ್ಟ್ರೀಯ ಯೋಗಪಟು ಕೆ. ಜೈಮುನಿ ಅವರ ಸಾಧನೆ ಗುರುತಿಸಿ, ಮೈಸೂರು ಮಹಾರಾಜರು ಹಾಗೂ ಸಂಸದರೂ ಆದ ಯದುವೀರ್ ಒಡೆಯರ್ ಅವರು `ನಾಲ್ವಡಿ ಕೃಷ್ಣರಾಜ ಒಡೆಯರ್ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ ಮಾಡಿದರು.
September 14, 2024