ದಾವಣಗೆರೆ, ಜು.17- ನೂತನ ಎಸ್.ಎಸ್. ಕೇರ್ ಟ್ರಸ್ಟಿನ ವಿದ್ಯಾರ್ಥಿ ವಿಭಾಗವು ಟ್ರಸ್ಟಿನ ಸಕ್ರಿಯ ಯೋಜನೆಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ನಗರದ ಜೆಜೆಎಂ ಕಾಲೇಜಿನ ಬಾಪೂಜಿ ಸಭಾಂಗಣದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಎಸ್.ಎಸ್. ಕೇರ್ ಟ್ರಸ್ಟ್ ವಿದ್ಯಾರ್ಥಿ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
2017 ರಿಂದ ಪ್ರಾರಂಭವಾದ ಆರೋಗ್ಯ ಶಿಬಿರದಂತಹ ಸಾಮಾಜಿಕ ಸೇವೆ ಎಲ್ಲರ ಮನ ಗೆದ್ದಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಘಟಕವು ನಿಯೋಜಿಸಿಕೊಂಡ ವಾರ್ಷಿಕ ಯೋಜನೆ ಯಶಸ್ವಿಯಾಗುವಂತೆ ಶ್ರಮವಹಿಸಲು ಮನವಿ ಮಾಡಿದರು.
ಟ್ರಸ್ಟಿನ ವಿದ್ಯಾರ್ಥಿ ವಿಭಾಗದ ಪದಾಧಿಕಾರಿಗಳು ಉತ್ತಮ ನಾಯಕತ್ವ ಬೆಳೆಸಿಕೊಳ್ಳುವ ಜತೆಗೆ ತಮ್ಮ ಕಾರ್ಯವನ್ನು ಜವಾಬ್ದಾರಿಯುತವಾಗಿ ನಿಭಾಯಿಸುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಜೆಜೆಎಂ ಕಾಲೇಜಿನ ಪ್ರಾಧ್ಯಾಪಕ ಮೂಗನ ಗೌಡ ಪಾಟೀಲ್ ಮಾತನಾಡಿ, ಪ್ರಭಾ ಮಲ್ಲಿಕಾ ರ್ಜುನ್ ಅವರ ನಾಯಕತ್ವದಲ್ಲಿ ಎಸ್.ಎಸ್. ಕೇರ್ ಟ್ರಸ್ಟ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ನಗರ ಪ್ರದೇಶಕ್ಕಷ್ಟೇ ಸೀಮಿತವಾಗದೆ. ಗ್ರಾಮಾಂತರ ಪ್ರದೇಶದಲ್ಲೂ ಆರೋಗ್ಯ ಶಿಬಿರದ ಸೇವೆ ನೀಡುತ್ತಿರುವುದನ್ನು ಶ್ಲ್ಯಾಘಿಸಿದರು.
ಕಾರ್ಯಕ್ರಮದಲ್ಲಿ ಜೆಜೆಎಂ ಕಾಲೇಜಿನ ಪ್ರಾಚಾರ್ಯರಾದ ಡಾ. ಶುಕ್ಲಾ ಶೆಟ್ಟಿ, ಎಸ್.ಎಸ್. ಹೈಟೆಕ್ ಕಾಲೇಜಿನ ಪ್ರಾಂಶುಪಾಲ ಡಾ. ಪ್ರಸಾದ್, ಪ್ರಾಧ್ಯಾಪಕರಾದ ಡಾ. ಜಿ.ಎಸ್.ಲತಾ, ಶಾಂತಲಾ ಅರುಣ್ ಕುಮಾರ್, ಶುಭಾ, ಎಸ್.ಅಶ್ವಿನಿ, ವಿದ್ಯಾರ್ಥಿ ವಿಭಾಗದ ಅಧ್ಯಕ್ಷ ಓಂ ದುಬೆ ಮತ್ತಿತರರಿದ್ದರು.