ಜಿಗಳಿ, ಸಿರಿಗೆರೆ, ಭಾನುವಳ್ಳಿಯಲ್ಲಿ ಸಂಭ್ರಮದ ಮೊಹರಂ ಆಚರಣೆ

ಜಿಗಳಿ, ಸಿರಿಗೆರೆ, ಭಾನುವಳ್ಳಿಯಲ್ಲಿ ಸಂಭ್ರಮದ ಮೊಹರಂ ಆಚರಣೆ

ಮಲೇಬೆನ್ನೂರು, ಜು.17- ಹಿಂದೂ-ಮುಸ್ಲಿಮರ ಭಾವೈಕ್ಯತೆಯ ಸಂಕೇತವಾದ ಮೊಹರಂ ಹಬ್ಬವನ್ನು ಹೊಳೆಸಿರಿಗೆರೆ, ಭಾನುವಳ್ಳಿ, ಜಿಗಳಿ, ಯಲವಟ್ಟಿ ಮತ್ತು ಕೆ.ಎನ್.ಹಳ್ಳಿ ಗ್ರಾಮಗಳಲ್ಲಿ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.

ಈ ಎಲ್ಲಾ ಗ್ರಾಮಗಳಲ್ಲಿ ಕೈ ದೇವರುಗಳನ್ನು ಪ್ರತಿಷ್ಠಾಪಿಸಿ, ಹಿಂದೂ-ಮುಸ್ಲಿಂ ಬಾಂಧವರು ವಿಶೇಷ ಪೂಜೆಯೊಂದಿಗೆ ಸಕ್ಕರೆ-ಬೆಲ್ಲ ನೈವೇದ್ಯ ಗೈದು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಪ್ರಾರ್ಥಿಸಿದರು.

ದೇವರನ್ನು ಹೊತ್ತವರು ಅಗ್ನಿ ಕುಂಡ ತುಳಿದು, ಗಮನ ಸೆಳೆದರು. ಬುಧವಾರ ಸಂಜೆ ಮೆರವಣಿಗೆ ಮೂಲಕ ಹೊಳೆ ಪೂಜೆ ನೆರವೇರಿಸಿ, ಹಬ್ಬಕ್ಕೆ ತೆರೆ ಎಳೆಯಲಾಯಿತು.

error: Content is protected !!