ಹರಿಹರ, ಜು.16- ನಗರದ ಅಮರಾವತಿಯ ಫ್ಲೈ ಓವರ್ ಹತ್ತಿರದ ಕೆಳಭಾಗದ ರಸ್ತೆ ಸಂಪೂರ್ಣ ಹಾಳಾಗಿ ರಸ್ತೆಯಲ್ಲಿರುವ ಕಬ್ಬಿಣದ ರಾಡುಗಳು ರಸ್ತೆಯ ಮೇಲಕ್ಕೆ ಬಂದಿದ್ದು, ರಸ್ತೆಯ ಮೇಲೆ ಎದ್ದಿರುವ ರಾಡುಗಳ ಮೇಲೆ ವಾಹನ ಚಲಾಯಿಸಿದರೆ ಟೈರ್ಗಳು ಪಂಚಾರ್ ಆಗುತ್ತವೆ ಎಂದು ಪಕ್ಕದಲ್ಲಿ ಸರಿಯುವ ವೇಳೆ ಸಾಕಷ್ಟು ಅಪಘಾತ ಸಂಭವಿಸಿ ಸಾರ್ವಜನಿಕರ ಸಾವು ನೋವುಗಳಿಗೆ ಕಾರವಾಗಿದೆ.
ಜೊತೆಗೆ ವಾಹನಗಳು ಕಬ್ಬಿಣದ ರಾಡುಗಳ ಮೇಲೆ ಹಾದು ಹೋದಾಗ ಟೈರುಗಳು ಬ್ಲಾಸ್ಟ್ ಆಗುವಂತಹ ಸಾಧ್ಯತೆಗಳು ಕೂಡ ಹೆಚ್ಚು ಇರುತ್ತದೆ.
ಈ ಕಾಂಕ್ರೀಟ್ ರಸ್ತೆಯಲ್ಲಿ ಬಹಳಷ್ಟು ಗುಂಡಿಗಳು ಇರುವುದರಿಂದ ಮಳೆಯಿಂದಾಗಿ ಗುಂಡಿಗಳಲ್ಲಿ ನೀರು ತುಂಬಿಕೊಂಡು ಗುಂಡಿಯ ಹಾಳ ಅಗಲವನ್ನು ಅರಿಯದೇ ವಾಹನಗಳು ಗುಂಡಿಗೆ ಬಿದ್ದು, ಯುವಕರು ಕೈ ಕಾಲು ಮುರಿದುಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಯುವಂತಾಗಿದೆ.
ಇಲ್ಲಿನ ರಸ್ತೆಯಲ್ಲಿ ದಿನಕ್ಕೆ ಸಣ್ಣ ಮತ್ತು ದೊಡ್ಡ ಪ್ರಮಾಣದ ಸಾವಿರಾರು ವಾಹನಗಳು ಸಂಚಾರ ಮಾಡುತ್ತವೆ. ಆದ್ದರಿಂದ ಇಲ್ಲಿನ ರಸ್ತೆಗೆ ಸಂಭಂದಿಸಿದ ಲೋಕೋಪಯೋಗಿ ಅಥವಾ ನಗರಸಭೆಯ ಇಲಾಖೆಯ ಅಧಿಕಾರಿಗಳು ಆದಷ್ಟು ಬೇಗನೇ ರಸ್ತೆಯನ್ನು ದುರಸ್ತಿಪಡಿಸಿ, ಸಾರ್ವಜನಿಕರು ನಿರ್ಭಯವಾಗಿ ಓಡಾಡುವುದಕ್ಕೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರು ಆಗ್ರಹಿಸಿದರು.