ಶಿವಪಂಚಾಕ್ಷರಿ ಮಂತ್ರದಿಂದ ಜೀವನ ಸಾರ್ಥಕ

ಶಿವಪಂಚಾಕ್ಷರಿ ಮಂತ್ರದಿಂದ ಜೀವನ ಸಾರ್ಥಕ

ಹರಿಹರದ ಕಾರ್ಯಕ್ರಮದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ಪ್ರತಿಪಾದನೆ

ಹರಿಹರ, ಜು.11- ವೀರಶೈವ ಧರ್ಮದಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಶ್ರೀ ಗುರುವಿನಿಂದ ಇಷ್ಟಲಿಂಗವನ್ನು ಪಡೆದು, ಮೋಕ್ಷದಾಯಕ  ಶಿವ ಪಂಚಾಕ್ಷರಿ ಮಂತ್ರವನ್ನು ಸ್ವೀಕರಿಸಿದರೆ,  ಜೀವನ ಸಾರ್ಥಕವಾಗುತ್ತದೆ ಎಂದು ರಂಭಾಪುರಿ ಪೀಠದ ಜಗದ್ಗುರು ಶ್ರೀ ವೀರ ಸೋಮೇಶ್ವರ ಮಹಾ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ದೇವಸ್ಥಾನ ರಸ್ತೆಯ ರೇಣುಕಾ ಮಂದಿರದಲ್ಲಿ ನಡೆದ ಮೂರನೇ ದಿನದ ಆಷಾಢ ಮಾಸದ  ಸಮಾರಂಭದಲ್ಲಿ ಇಷ್ಟಲಿಂಗ ಪೂಜೆ ನೆರವೇರಿಸಿದ ನಂತರ ಶ್ರೀಗಳು ಆಶೀರ್ವಚನ ನೀಡಿದರು.

ವೀರಶೈವ ಧರ್ಮಾಭಿಮಾನಿಗಳು ಧರ್ಮ, ಸಂಸ್ಕೃತಿ ಮತ್ತು ಆದರ್ಶ ಗಳನ್ನು, ಉಳಿಸಿಕೊಂಡು ಬರುವ ನಿಟ್ಟಿನಲ್ಲಿ ಚಿಂತನೆ ನಡಸಬೇಕಾಗಿದೆ. ವೀರಶೈವ ಲಿಂಗಾಯತರು ಎಂದು ಹೇಳಿಕೊಳ್ಳಬೇಕಾದರೆ ಕೊರಳಲ್ಲಿ ರುದ್ರಾಕ್ಷಿ, ಹಣೆಯಲ್ಲಿ ವಿಭೂತಿ ಧಾರಣೆ, ಬಾಯಲ್ಲಿ ಶಿವಪಂಚಾಕ್ಷರಿ ಮಂತ್ರ ಇರಬೇಕು. ಆಗ  ವೀರಶೈವರು ಎಂದು ಹೇಳಿಕೊಳ್ಳಬಹುದು. ಇದರಿಂದಾಗಿ ಸಮಾಜದಲ್ಲಿ ಗೌರವ ಘನತೆ ಬಹಳ ದೊಡ್ಡ ಮಟ್ಟದಲ್ಲಿ ದೊರೆಯುತ್ತದೆ. ಇವುಗಳನ್ನು ಸರಿಯಾದ ರೀತಿಯಲ್ಲಿ ಪಾಲಿಸದೇ ಹೋದರೆ ವೀರಶೈವ ಕುಲದಲ್ಲಿ ಹುಟ್ಟಿದ್ದು ಪ್ರಯೋಜನಕ್ಕೆ ಬಾರದು ಎಂದು ಹೇಳಿದರು.

ನಗರದ  ಶ್ರೀ ರೇಣುಕ ಮಂದಿರ ಕಟ್ಟಡದ ಜೀರ್ಣೋದ್ಧಾರಕ್ಕೆ ಸ್ಥಳೀಯ ಶಾಸಕ  ಬಿ.ಪಿ. ಹರೀಶ್, ತಮ್ಮ ಅನು ದಾನದಲ್ಲಿ 5 ಲಕ್ಷ ರೂ. ನೀಡಿರುವುದು ಶ್ಲ್ಯಾಘನೀಯ ಕಾರ್ಯವಾಗಿದ್ದು, ಸಮಿ ತಿಯ ಪದಾಧಿಕಾರಿಗಳು ಆ ಹಣವನ್ನು ಕಟ್ಟಡ ಕಾಮಗಾರಿ ಪೂರ್ಣಗೊಳಿಸಲು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಬೇಕು ಎಂದು ಜಗದ್ಗುರುಗಳು ಕಿವಿಮಾತು ಹೇಳಿದರು.

ಮಣಕೂರು ಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳು ಮಾತನಾಡಿ, ಲಿಂಗ ಧಾರಣೆ ಮಾಡಿ ಜಪ ಮಾಡುವುದರಿಂದ ಹೃದಯ ರೋಗ ನಿವಾರಿಸಲು ಸಾಧ್ಯವಿದೆ.ಗುರು ಪಾದೋದಕ ಪಡೆಯುವುದರಿಂದ ಬಿ.ಪಿ ರೋಗದಿಂದ ಮುಕ್ತಿ  ಪಡೆಯಲು ಸಾಧ್ಯವಿದೆ.  ಅಲ್ಲದೇ ಲಿಂಗಪೂಜೆ ಮಾಡುವುದರಿಂದ ಬಹಳಷ್ಟು ಸಂಪತ್ತು, ಆಯಸ್ಸು, ಆಸ್ತಿ ಸೇರಿದಂತೆ ಸಕಲ ಸಂಪತ್ತು ಪಡೆಯಲು ಸಹಕಾರಿ ಯಾಗುತ್ತದೆ ಎಂದು ಹೇಳಿದರು.

ವೇದಮೂರ್ತಿ ವಿಶ್ವನಾಥ ಶ್ರೀಗಳು, ಕರೆವಾಡಿ ಮಠದ  ಮಳೆ ಮಲ್ಲಿಕಾರ್ಜುನ ಶ್ರೀಗಳು ಲಕ್ಷ್ಮೇಶ್ವರ ಇವರು ಉಪದೇಶ ಭಾಷಣ ಮಾಡಿದರು.

ಈ ಸಂದರ್ಭದಲ್ಲಿ ವಿಶ್ವನಾಥ ಶಾಸ್ತ್ರಿಗಳು, ಸಿದ್ದಯ್ಯ ಹಿರೇಮಠ, ಗುತ್ತೂರು ಹಾಲೇಶಗೌಡ್ರು ಡಿ.ಜಿ. ಶಿವಾನಂದಪ್ಪ, ಟಿ.ಜೆ. ಮುರುಗೇಶಪ್ಪ,  ಪೂಜಾರ್ ಅಣ್ಣಪ್ಪ, ಕಂಚಿಕೇರಿ ಕೊಟ್ರೇಶಪ್ಪ, ಪಂಚಾಕ್ಷರಿ, ಎನ್.ಇ. ಸುರೇಶ್, ಜಿ.ವಿ. ಪ್ರವೀಣ್, ಚಂದ್ರಪ್ಪ ಹೊಸಪೇಟೆ, ಹಾಲಸ್ವಾಮಿ, ಗುರುಬಸವರಾಜ್, ಸಮಾಳ ಚಂದ್ರಪ್ಪ, ರಾಚಪ್ಪ, ಬೆಲ್ಲದ ಬಸವರಾಜ್, ಹಂಸಬಾವಿ ಮೋಹನ್ ಕುಮಾರ್, ಕರಿಬಸಪ್ಪ ಕಂಚಿಕೇರಿ, ಸಾಕಮ್ಮ, ಅಂಜು ರಾಜೇನವರ್, ಕೊಟ್ರಮ್ಮ, ಶಿಲ್ಪಾ ಮುರುಗೇಶಪ್ಪ, ಹಾಲಮ್ಮ ಆನ್ವೇರಿ ಇತರರು ಹಾಜರಿದ್ದರು.

error: Content is protected !!